ಉಡುಪಿ: ಆಧಾರ್ ವಿವರ ಕಡ್ಡಾಯ
ಉಡುಪಿ, ಜ.31: ಸರಕಾರದಿಂದ ಯಾವುದೇ ಸೌಲಭ್ಯವನ್ನು ಪಡೆಯುವಲ್ಲಿ ಆಧಾರ್ ಸಂಖ್ಯೆಯನ್ನು ಹಾಗೂ ನೇರ ಹಣ ಸಂದಾಯ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್/ಅಂಚೆ ಖಾತೆ ವಿವರ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ ವೇತನ ಹಾಗೂ ಮೈತ್ರಿ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಎಲ್ಲ ಫಲಾನುಭವಿಗಳಿಗೂ ಹಾಗೂ ಹೊಸದಾಗಿ ಸೌಲಭ್ಯ ಬಯಸುವ ಎಲ್ಲಾ ಅರ್ಜಿದಾರರಿಗೂ ಬ್ಯಾಂಕ್/ಅಂಚೆ ಖಾತೆ ಸಂಖ್ಯೆ, ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ ಮನಿ ಆರ್ಡರ್ ಮೂಲಕ ಪಿಂಚಣಿ ಪಡೆಯುತ್ತಿರುವ ಹಾಗೂ ಆಧಾರ್ ಸಂಖ್ಯೆಯನ್ನು ಇನ್ನೂ ನೀಡಲು ಬಾಕಿ ಇರುವ ಪಿಂಚಣಿದಾರರು ಬ್ಯಾಂಕ್/ಅಂಚೆ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಇತ್ತೀಚೆಗೆ ಪಿಂಚಣಿ ಪಾವತಿಯಾದ ಎಂ.ಒ. ಸ್ಲಿಪ್‌ನ (ಮನಿಯಾರ್ಡರ್ ಸ್ಲಿಪ್) ನಕಲು ಪ್ರತಿಯನ್ನು ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮ ಲೆಕ್ಕಿಗರಲ್ಲಿ ಕೂಡಲೇ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.