×
Ad

ಪಂಡಿತ್ ಉಪೇಂದ್ರ ಭಟ್‌ರಿಗೆ ಅಭಿನಂದನೆ

Update: 2017-01-31 23:49 IST

ಮಂಗಳೂರು, ಜ.31: ಖ್ಯಾತ ಹಿಂದುಸ್ಥಾನಿ ಗಾಯಕ, ಮಂಗಳೂರಿನ ಗೋಕರ್ಣ ಮಠದ ವೈದಿಕ ಮನೆತನದವರಾದ ಪಂಡಿತ್ ಕೆ. ಉಪೇಂದ್ರ ಭಟ್‌ರಿಗೆ ಮಹಾರಾಷ್ಟ್ರ ಸರಕಾರ ಹಿಂದುಸ್ಥಾನಿ ಶಾಸ್ತ್ರೀಯ 2016ನೆ ಸಾಲಿನ ಸಾಂಸ್ಕೃತಿಕ ಪ್ರಶಸ್ತಿಯನ್ನು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಅವರನ್ನು ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಇಂದು ಗೌರವಿಸಿ ಅಭಿನಂದಿಸಲಾಯಿತು.

 ಮಾಜಿ ಶಾಸಕ ಎನ್.ಯೋಗೀಶ್ ಭಟ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಡಾ.ಎಂ.ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ ಪೊಳಲಿ, ಪ್ರೊ. ಜಿ.ಕೆ. ಭಟ್ ಸೇರಾಜೆ, ಕಸಾಪ ಮಂಗಳೂರು ಘಟಕಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಆಕೃತಿ ಪ್ರಿಂಟರ್ಸ್‌ನ ಕಲ್ಲೂರು ನಾಗೇಶ್, ಪಿ. ಸುರೇಶ್ ಶೆಣೈ, ದ.ಕ. ಜಿಲ್ಲಾ ಕಸಾಪ ಗೌರವ ಕೋಶಾಧಿಕಾರಿ ಪೂರ್ಣಿಮಾರಾವ್ ಪೇಜಾವರ, ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್, ದ.ಕ.ಜಿಲ್ಲಾ ಗೌರವ ಕಾರ್ಯದರ್ಶಿ ಬಿ. ತಮ್ಮಯ್ಯ, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News