ನಾಳೆಯಿಂದ ಬ್ರೆಕ್ಸಿಟ್ ಅಂತಾರಾಷ್ಟ್ರೀಯ ಸಮ್ಮೇಳನ
ಮಂಗಳೂರು, ಜ.31: ಐರೋಪ್ಯ ಆರ್ಥಿಕ ಸಮುದಾಯದಿಂದ ಬ್ರಿಟನ್‌ನ ಹಿನ್ನೆಡೆ, ಅದರ ಆಗುಹೋಗುಗಳ ಕುರಿತು ಜಾಗತಿಕ ದೇಶಗಳು ಹಾಗೂ ಭಾರತದಲ್ಲಿ ಆರ್ಥಿಕ, ಸಾಮಾಜಿಕ ರಾಜಕೀಯ ಹಾಗೂ ದೂರಗಾಮಿ ಪರಿಣಾಮಗಳ ಕುರಿತು ಬ್ರೆಕ್ಸಿಟ್ ಅಂತಾರಾಷ್ಟ್ರೀಯ ಸಮ್ಮೇಳನವು ಫೆ.2 ಹಾಗೂ 3ರಂದು ಎಂ.ಎನ್.ಎಂ. ಬೆಸೆಂಟ್ ಸ್ನಾತಕೋತ್ತರ ಕಾಲೇಜಿನಲ್ಲಿ ನಡೆಯಲಿದೆ ಎಂದು ಮಣೇಲ್ ಶ್ರೀನಿವಾಸ ನಾಯಕ್ ಸ್ಮಾರಕ ಬೆಸೆಂಟ್ ಸ್ನಾತಕೋತ್ತರ ಕಾಲೇಜಿನ ಡಾ.ನಾರಾಯಣ ಕಾಯರ್ ಕಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನವನ್ನು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಉದ್ಘಾಟಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಪೀಪಲ್ ಅಡ್ವೈಸರಿ ಸರ್ವಿಸಸ್‌ನ ರಾಜೀವ್ ಕೃಷ್ಣನ್, ಗ್ಲೋಬಲ್ ಹೆಡ್ ಆಫ್ ಇಕಲನಾಮಿಕ್ಸ್ ಮತ್ತು ಹೆಡ್ ಆಫ್ ರಿಸರ್ಚ್, ಏಷ್ಯಾ ಪೆಸಿಫಿಕ್, ಡಾಯ್ಚ ಬ್ಯಾಂಕ್‌ನ ಎಂ.ಡಿ. ಮೈಕಲ್ ಸ್ಪೆನ್ಸರ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಏಷ್ಯಾದ ಮುಖ್ಯ ಅರ್ಥ ಶಾಸ್ತ್ರಜ್ಞ ಡೇವಿಡ್ ಮಾನ್, ಗ್ರೂಪ್ ಸಿಎಫ್‌ಒ ಟಾಟಾ ಗ್ಲೋಬಲ್ ಬೆವರೇಜಸ್ ಲಿ. ನ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಕೃಷ್ಣಕುಮಾರ್, ಡಿಯಾಗೊ ಪಿ.ಇರಿಬರ್ರೆನ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಮೆನ್ಸ್ ನ್ಯಾಶನಲ್ ಸೆಕ್ರೆಟರಿ ಶಾಮಸುಂದರ್ ಕಾಮತ್, ಪ್ರೊ.ರವೀಶ್, ಪ್ರೊ.ಆಶಾಲತಾ ಉಪಸ್ಥಿತರಿದ್ದರು.