ಬಸ್- ಬೈಕ್ ಢಿಕ್ಕಿ: ಸವಾರ ಮೃತ್ಯು
Update: 2017-01-31 23:54 IST
ಬ್ರಹ್ಮಾವರ, ಜ.31: ಬೈಕೊಂದು ಬಸ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ರಾತ್ರಿ 9ಗಂಟೆ ಸುಮಾರಿಗೆ ಬ್ರಹ್ಮಾವರ ಬಿಎಸ್ಸೆೆನ್ನೆಲ್ ಕಚೇರಿ ಬಳಿಯ ಪ್ಲೆಓವರ್ ಮೇಲೆ ನಡೆದಿದೆ.
ಮೃತರನ್ನು ಕೋಟ ಪಡುಕೆರೆಯ ಚಂದ್ರ(41) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಪಣಜಿ ಕಡೆಗೆ ಹೋಗುತ್ತಿದ್ದ ದುರ್ಗಾಂಬಾ ಬಸ್‌ಗೆ ್ಲೆ ಓವರ್‌ನಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.