ಉಳ್ಳಾಲ :ಬ್ಯಾರಿಕೇಡ್ ಗೆ ಬೈಕ್ ಢಿಕ್ಕಿ , ಸವಾರ ಸಾವು

Update: 2017-01-31 18:28 GMT

ಉಳ್ಳಾಲ  , ಜ . 31 : ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದಿಲ್ಲಿ ನಡೆದಿದೆ.

ಮೃತರನ್ನು ಬಸ್ ನಿರ್ವಾಹಕ ಇಮ್ರಾನ್ (30) ಎಂದು ಗುರುತಿಸಲಾಗಿದೆ.

ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದಾಗ ಉಳ್ಳಾಲ ಬೈಲಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

 ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News