ತ್ಯಾಜ್ಯ ವಿಲೇವಾರಿ ಸಮಸ್ಯೆ: ತಾತ್ಕಾಲಿಕ ಮುಕ್ತಿ

Update: 2017-01-31 18:26 GMT

ಉಪ್ಪಿನಂಗಡಿ, ಜ.31:ಕುಮಾರಧಾರಾ ನದಿ ಸಮೀಪದಲ್ಲಿ ಅವೈಜ್ಞಾನಿಕ ವಾಗಿ ತ್ಯಾಜ್ಯ ವಿಲೇವಾರಿ ಮಾಡು ತ್ತಿರುವುದರಿಂದ ಸಾರ್ವಜನಿ ರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪತ್ರಿಕಾ ವರದಿ ಬಂದ ಬಳಿಕ ಎಚ್ಚೆತ್ತುಕೊಂಡಿರುವ ಉಪ್ಪಿನಂಗಡಿ ಗ್ರಾಪಂ ಇದೀಗ ಅಲ್ಲಿ ರಾಶಿ ಹಾಕಲಾಗಿದ್ದ ತ್ಯಾಜ್ಯವನ್ನು ಗುಂಡಿಗೆ ಹಾಕಿ ಅದರ ಮೇಲೆ ಮಣ್ಣು ಹಾಕಿ ಮುಚ್ಚಿದೆ.

ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ತಂದು ಉಪ್ಪಿನಂಗಡಿ ಪಂಚಾಯತ್ ಸಿಬ್ಬಂದಿ ಕುಮಾರಧಾರಾ ನದಿಯ ಸನಿಹದಲ್ಲೇ ಅವೈಜ್ಞಾನಿಕವಾಗಿ ವಿಲೇ ವಾರಿ ಮಾಡುತ್ತಿದ್ದರು ಎನ್ನಲಾಗಿದೆ. ಈ ತ್ಯಾಜ್ಯ ವಿಲೇವಾರಿ ಕೇಂದ್ರದ ಸನಿಹದಲ್ಲೇ ಜನವಸತಿ ಪ್ರದೇಶಗಳು, ಶಾಲೆಗಳು, ದೇವಸ್ಥಾನ ಇದ್ದು, ಸ್ಥಳೀಯರಿಗೆ ಸಮಸ್ಯೆಯಾಗಿ ಪರಿಣ ಮಿಸಿತ್ತು. ಮಳೆಗಾಲದಲ್ಲಿ ಮಳೆ ನೀರಿನೊಂದಿಗೆ ತ್ಯಾಜ್ಯದಿಂದ ಹರಿದ ಮಲಿನ ನೀರು ಕುಮಾರಧಾರಾ ನದಿಯನ್ನು ಸೇರುತ್ತಿತ್ತು.

ಬೇಸಿಗೆಯಲ್ಲಿ ಇಲ್ಲಿ ರಾಶಿ ಹಾಕಲಾಗಿದ್ದ ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವುದರಿಂದ ಪರಿಸರವಿಡೀ ಹೊಗೆ ತುಂಬಿಕೊಂಡು ಪರಿಸರ ಮಾಲಿನ್ಯಕ್ಕೆ ಕಾರಣವಾಗಿತ್ತು. ಕೆಲವು ದಿನಗಳ ಹಿಂದೆ ಇದೇ ರೀತಿ ರಾಶಿ ಹಾಕಲಾಗಿದ್ದ ತ್ಯಾಜ್ಯಕ್ಕೆ ಬೆಂಕಿ ಹಾಕಿದ್ದರಿಂದ ಪರಿಸರವಿಡೀ ದುರ್ವಾಸನೆ ತುಂಬಿತ್ತು ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಎಚ್ಚೆತ್ತುಕೊಂಡ ಉಪ್ಪಿನಂಗಡಿ ಗ್ರಾಪಂ ಅಲ್ಲಿಯೇ ಗುಂಡಿ ತೋಡಿ ತ್ಯಾಜ್ಯವನ್ನು ಹಾಕಿ ಮುಚ್ಚಿದೆ. ಇದರಿಂದಾಗಿ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಸಿಕ್ಕಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News