ಸೈಕಲ್ ಗೆ ಕಾರು ಢಿಕ್ಕಿ: ಸವಾರ ಸಾವು
Update: 2017-02-01 12:36 IST
ಮುಂಡಗೋಡ, ಫೆ.1: ಸೈಕಲ್ ಸವಾರನೋರ್ವನಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮಳಗಿ ಗ್ರಾಮದಲ್ಲಿ ನಡೆದಿದೆ.
ಮಳಗಿ ಗ್ರಾಮದ ನಿವಾಸಿ ಆನಂದಪ್ಪ ಫಕ್ಕೀರಪ್ಪ ಹಾಳೂರು(58) ಮೃತಪಟ್ಟ ವ್ಯಕ್ತಿ. ಮಂಗಳವಾರ ಸಂಜೆ ಹೊಲದ ಕೆಲಸಕ್ಕೆಂದು ಸೈಕಲ್ ನಲ್ಲಿ ತೆರಳಿದ್ದ ಆನಂದಪ್ಪನಿಗೆ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಆನಂದಪ್ಪರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ ಸಾವನಪ್ಪಿದ್ದಾರೆ.
ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನೋವಾ ಕಾರು ಮತ್ತು ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.