×
Ad

ನೇಣು ಬಿಗಿದು ಆತ್ಮಹತ್ಯೆ

Update: 2017-02-01 23:06 IST

ಮಂಗಳೂರು, ಫೆ. 1: ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಕೊಟ್ಟಾರ ಚೌಕಿ ಬಳಿ ಕುಟುಂಬ ಸಮೇತ ವಾಸಿಸುತ್ತಿದ್ದ ಮೂಲತಃ ಬಾಗಲಕೋಟೆಯ ನಿವಾಸಿ ಪರಸಪ್ಪ (35) ಅವರ ಮೃತದೇಹ ಬುಧವಾರ ಆತ್ಮಹತ್ಯೆ ಮಾಡಿಕೊಂಡು ಸ್ಥಿತಿಯಲ್ಲಿ ಮಣ್ಣಗುಡ್ಡೆಯಲ್ಲಿ ಪತ್ತೆಯಾಗಿದೆ.

ಮಂಗಳವಾರ ಮನೆಯಿಂದ ಹೊರತೆರಳಿದ್ದ ಅವರು ಮಣ್ಣಗುಡ್ಡೆಯ ಬಳಿಯಿರುವ ಖಾಲಿ ಸೈಟ್‌ವೊಂದರಲ್ಲಿರುವ ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡಿದ್ದಾರೆ.

ಮೃತ ಪರಸಪ್ಪ ಸರಿಯಾಗಿ ಕೆಲಸಕ್ಕೆ ಹೋಗದೆ, ಕುಡಿತದ ಚಟ ಹೊಂದಿದ್ದ ಎನ್ನಲಾಗಿದೆ. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣವೆಂದು ಅಂದಾಜಿಸಲಾಗಿದೆ.

ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಈ ಬಗ್ಗೆ ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News