ತುಂಬೆಯಲ್ಲಿ ವಿಜ್ಞಾನ, ಜಾನಪದ ಪಾರಂಪರಿಕ ವಸ್ತು ಪ್ರದರ್ಶನ

Update: 2017-02-01 18:13 GMT

ಬಂಟ್ವಾಳ. ತುಂಬೆ, ಫೆ.1: ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ವತಿಯಿಂದ ಒಂದು ದಿನದ ವಿಜ್ಞಾನ ಮಾದರಿಗಳ ಪ್ರದರ್ಶನ, ಕರಕುಶಲ ಕಲಾ ಪ್ರದರ್ಶನ ಹಾಗೂ ಜಾನಪದ-ಪಾರಂಪರಿಕ ವಸ್ತುಗಳ ಪ್ರದರ್ಶನ ನಡೆಯಿತು.

ತುಂಬೆ ಪದವಿ ಪೂರ್ವ ಕಾಲೇಜಿನ ಬೆಳ್ಳಿಹಬ್ಬದ ಕಟ್ಟಡದಲ್ಲಿ ನಡೆದ ಪ್ರದರ್ಶನವನ್ನು ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ಬಿ.ಅಬ್ದುಸ್ಸಲಾಂ ಉದ್ಘಾಟಿಸಿದರು. ಸಂಸ್ಥಾಪಕ ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅಧ್ಯಕ್ಷತೆ ವಹಿಸಿದ್ದರು.

ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸ್ವತ: ತಯಾರಿಸಿದ ಕಲಾ ಚಿತ್ರಗಳ ಉಸ್ತುವಾರಿಯನ್ನು ಚಿತ್ರಕಲಾ ಶಿಕ್ಷಕರಾದ ದೇವದಾಸ್ ಹಾಗೂ ಪದ್ಮನಾಭ ಉಪಾಧ್ಯಾಯ ವಹಿಸಿದ್ದರು. ವಿಜ್ಞಾನ ಮಾದರಿ ಪ್ರಸ್ತುತಿಯ ಉಸ್ತುವಾರಿಯನ್ನು ಶಿಕ್ಷಕಿಯರಾದ ರೇಖಾ ಎನ್. ಹಾಗೂ ಸಲ್ಮಾ ಲೋಬೋ ವಹಿಸಿದ್ದರು. ಪಾರಂಪರಿಕ ವಸ್ತು ಪ್ರದರ್ಶನದ ಉಸ್ತುವಾರಿಯನ್ನು ಜಗದೀಶ್ ರೈ ವಹಿಸಿಕೊಂಡಿದ್ದರು. ವಿದ್ಯಾ ಕೆ. ಹಾಗೂ ಆ್ಯಲಿಸ್ ಲೂಸಿ ಕ್ರಾಸ್ತ ಸಹಕರಿಸಿದರು.

ತಾಲೂಕಿನ ಸುಮಾರು ಹನ್ನೆರಡು ಶಾಲೆಗಳ ಎರಡು ಸಾವಿರದಷ್ಟು ವಿದ್ಯಾರ್ಥಿಗಳು ವೀಕ್ಷಿಸಿದರು. ಕಾರ್ಯಕ್ರಮದ ಪ್ರಧಾನ ಸಂಘಟಕ ತುಂಬೆ ಪಪೂ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶ್ರೀನಿವಾಸ ಕೆದಿಲ ವಂದಿಸಿದರು. ಟ್ರಸ್ಟಿ ಬೀಫಾತಿಮ, ಆಡಳಿತಾಧಿಕಾರಿ ಕಿಶೋರ್ ಸುವರ್ಣ, ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಬಿ. ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News