ರಸ್ತೆ ಅಪಘಾತ: ಇಬ್ಬರು ಮೃತ್ಯು
Update: 2017-02-01 23:45 IST
ಹೆಬ್ರಿ, ಫೆ.1: ಹೆಬ್ರಿ ಗ್ರಾಮದ ಕೊಳಗುಡ್ಡೆ ಎಂಬಲ್ಲಿ ಜ.31ರಂದು ರಾತ್ರಿ 10:30ರ ಸುಮಾರಿಗೆ ಈಚರ್ ಗೂಡ್ಸ್ ವಾಹನ ಹಾಗೂ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ರಾಣೆಬೆನ್ನೂರಿನ ಉಮೇಶ್ ರೇವಣೆಪ್ಪ(39) ಹಾಗೂ ಕಾರು ಚಾಲಕ ಕರಿಬಸಪ್ಪ(23) ಎಂದು ಗುರುತಿಸಲಾಗಿದೆ. ಇವರಿಬ್ಬರು ರಾಣೆಬೆನ್ನೂರಿನಿಂದ ಮಣಿಪಾಲ ಆಸ್ಪತ್ರೆಗೆ ಕಾರಿನಲ್ಲಿ ಆಗಮಿಸಿದ್ದು, ಕೊಳಗುಡ್ಡೆ ಎಂಬಲ್ಲಿ ಉಡುಪಿಯಿಂದ ಶಿವಮೊಗ್ಗದ ಕಡೆ ಹೋಗುತ್ತಿದ್ದ ಈಚರ್ ಗೂಡ್ಸ್ ವಾಹನ ಎದುರಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆಯಿತು.
ಇದರಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.