ಕಾಂಪೌಂಡ್‌ಗೆ ಲಾರಿ ಢಿಕ್ಕಿ: ಪ್ರಕರಣ ದಾಖಲು
Update: 2017-02-01 23:46 IST
ಮಣಿಪಾಲ, ಫೆ.1: ಸಂತೆಕಟ್ಟೆ ಭಾರತ್ ಗ್ಯಾಸ್ ಏಜೆನ್ಸಿಯ ಅಡುಗೆ ಗ್ಯಾಸ್ ಸರಬರಾಜು ಮಾಡುವ ಲಾರಿಯೊಂದು ಕಟ್ಟಡವೊಂದರ ಕಾಂಪೌಂಡ್‌ಗೆ ಢಿಕ್ಕಿ ಹೊಡೆದ ಬಗ್ಗೆ ದೂರು ದಾಖಲಾಗಿದೆ.
ಗ್ಯಾಸ್ ಸರಬರಾಜು ಲಾರಿ ಮಂಗಳವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಈಶ್ವರ ನಗರದ ರೆಸಿಡಿಯನ್ ವರ್ಲ್ಡ್ ಕಟ್ಟಡದ ಮುಂದಿನ ಗೇಟ್, ಕಂಬ ಮತ್ತು ಕಾಂಪೌಂಡ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸುಮಾರು 2,00,000ರೂ. ನಷ್ಟ ಉಂಟಾಗಿದೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.