ಸುಳ್ಯ ತಾಲೂಕು ಕಚೇರಿ ಎದುರು ಪ್ರತಿಭಟನೆ

Update: 2017-02-01 18:19 GMT

ಸುಳ್ಯ, ಫೆ.1: ಎಂಬಿಬಿಎಸ್ ಪದವಿ ಪೂರ್ಣಗೊಳಿಸಿ ಹೊರಬರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಕೆಯ ನಿರ್ಗಮನ ಪರೀಕ್ಷೆಯನ್ನು ಕಡ್ಡಾಯ ಮಾಡುವುದನ್ನು ವಿರೋಸಿ ಸುಳ್ಯದಲ್ಲಿ ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಐಎಂಎ ಸುಳ್ಯ ಘಟಕದ ಎಲ್ಲಾ ವೈದ್ಯರುಗಳಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಐಎಂಎ ಸುಳ್ಯ ಘಟಕದ ಕಾರ್ಯದರ್ಶಿ ಡಾ.ಗೀತಾ ದೊಪ್ಪರವರು ಮತ್ತು ಖಜಾಂಚಿ ಡಾ.ನವ್ಯಾ ಮಾತನಾಡಿದರು. 

ಈ ನಿರ್ಗಮನ ಪರೀಕ್ಷೆಯ ಮಸೂದೆಯನ್ನು ಜಾರಿಗೊಳಿಸುವುದು ಬೇಡ ಎಂಬ ಅಹವಾಲನ್ನು ತಹಶೀಲ್ದಾರರ ಮೂಲಕ ಜಿಲ್ಲಾಕಾರಿಗಳಿಗೆ ನೀಡಿದರು. ಡಾ.ರವಿಕಾಂತ್, ಡಾ.ಶಿವಣ್ಣ ಗೌಡ, ಡಾ.ರಂಗನಾಥ, ಡಾ.ರವಿಶಂಕರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News