ಜಾನುವಾರು ಸಾಗಾಟ: ಆರೋಪಿಗಳ ಸೆರೆ
Update: 2017-02-01 23:50 IST
ಬಂಟ್ವಾಳ, ಫೆ.1: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ಪಿಕಪ್ ವಾಹನದಲ್ಲಿ ಮಂಗಳೂರಿನ ಕಸಾಯಿಖಾನೆಗೆ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯ ಯುವಕರ ತಂಡವೊಂದು ಹಿಡಿದು ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಪಿಕಪ್ ವಾಹನ ಚಾಲಕ ನೀರುಮಾರ್ಗ ನಿವಾಸಿ ಸಾದಿಕ್ ಮತ್ತು ಸಂಜಯ ಡಿಸೋಜ ಬಂತ ಆರೋಪಿಗಳು. ಪೊಲೀಸರು ನಾಲ್ಕು ದನ ಮತ್ತು ಒಂದು ಕರು ಸಹಿತ ಪಿಕಪ್ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೆ ಸಂಬಂಸಿದಂತೆ ಅಪರಿಚಿತ ತಂಡದ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಠಾಣಾಕಾರಿ ನಂದಕುಮಾರ್ ತಿಳಿಸಿದ್ದಾರೆ.