×
Ad

ಮೂಡುಬಿದಿರೆ : ದನ ಕಳವಿಗೆ ವಿಫಲ ಯತ್ನ

Update: 2017-02-01 23:53 IST

ಮೂಡುಬಿದಿರೆ, ೆ.1: ಇಲ್ಲಿಗೆ ಸಮೀಪದ ಕೋಟೆಬಾಗಿಲಿನ ಸುಭಾಷ್‌ನಗರದಲ್ಲಿ ಮನೆಯವರಿಗೆ ತಲವಾರು ತೋರಿಸಿ ಕೊಟ್ಟಿಗೆಯಲ್ಲಿದ್ದ ದನ ಕಳವಿಗೆ ವಿಲ ಯತ್ನ ನಡೆಸಿದ ಘಟನೆ ಬುಧವಾರ ನಸುಕಿನ ಜಾವ ನಡೆದಿದೆ.

ಸುಭಾಷ್‌ನಗರದ ರವೀಶ್ ಎಂಬವರ ಮನೆ ಎದುರಿನ ರಸ್ತೆ ಬದಿಯಲ್ಲಿ ಬುಧವಾರ ನಸುಕಿನ ಜಾವ ಬಿಳಿ ಬಣ್ಣದ ಕಾರೊಂದರಲ್ಲಿ ಅಪರಿಚಿತ ಮೂರು-ನಾಲ್ಕು ಮಂದಿ ಬಂದಿದ್ದರೆಲಾಗಿದೆ. ಶಬ್ದ ಕೇಳಿ ಮನೆ ಮಾಲಕ ರವೀಶ್ ಹೊರಗೆ ಬಂದು ನೋಡಿದಾಗ ಕೊಟ್ಟಿಗೆಯತ್ತ ಟಾರ್ಚ್ ಲೈಟ್ ಹಾಕಿ ದನ ಕಳಗೈಯಲು ಯತ್ನಿಸುತ್ತಿದ್ದರು ಎಂದು ದೂರಲಾಗಿದೆ.

ಈ ಸಂದರ್ಭ ರವೀಶ್ ಬೊಬ್ಬೆ ಹಾಕಿದಾಗ ಆರೋಪಿಗಳು ಅವರ ಮುಖಕ್ಕೆ ಟಾರ್ಚ್‌ಲೈಟ್ ಹಾಕಿ ತಮ್ಮಲ್ಲಿದ್ದ ತಲವಾರು ಝಳಪಿಸಿ ಹತ್ತಿರ ಬಂದರೆ ಜಾಗ್ರತೆ ಎಂದು ಎಚ್ಚರಿಕೆ ನೀಡಿದರೆನ್ನಲಾಗಿದೆ. ಬಳಿಕ ಆರೋಪಿಗಳು ಮೂಡುಬಿದಿರೆ ರಸ್ತೆ ಕಡೆ ತೆರಳಿದರೆನ್ನಲಾಗಿದೆ. ಈ ಬಗ್ಗೆ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News