11ರಂದು ‘ವಾಕ್ ಆ್ ಹೋಪ್’ ನಡಿಗೆ

Update: 2017-02-01 18:27 GMT

ಉಡುಪಿ, ಫೆ.1: ಮಹಿಳಾ ಉದ್ಯಮಿಗಳ ಅಭಿವೃದ್ಧಿ ವೇದಿಕೆ ‘ಪವರ್’ ವತಿಯಿಂದ ಏಕತೆ ಮತ್ತು ಪರಸ್ಪರ ಸಹಕಾರ ಮನೋಭಾವದ ಉತ್ತೇಜನಕ್ಕಾಗಿ ‘ವಾಕ್ ಆ್ ಹೋಪ್’(ಭರವಸೆಯ ನಡಿಗೆ) ಯನ್ನು ೆ.11ರಂದು ಸಂಜೆ 4:30ಕ್ಕೆ ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಣಿಪಾಲದ ರಜತಾದ್ರಿಯಿಂದ ಮಣಿಪಾಲ ಟೈಗರ್ ಸರ್ಕಲ್‌ವರೆಗೆ ನಡೆಯುವ ಈ ನಡಿಗೆಗೆ ಉಡುಪಿ ಜಿಪಂ ಸಿಇಒ ಪ್ರಿಯಾಂಕಾ ಮೇರಿ ್ರಾನ್ಸಿಸ್ ಹಸಿರು ನಿಶಾನೆ ತೋರಿಸಲಿರುವರು ಎಂದು ಪವರ್ ಅಧ್ಯಕ್ಷೆ ಸರಿತಾ ಸಂತೋಷ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಸಂದರ್ಭ ವಿವಿಧ ಕ್ಷೇತ್ರಗಳ ಮಹಿಳಾ ಉದ್ಯಮಿಗಳು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಇನ್ನರ್‌ವೀಲ್, ಮಣಿಪಾಲ, ಉಡುಪಿ ಮಹಿಳಾ ಸಮಾಜ, ಕಲಾವಿದರು, ವಿದ್ಯಾರ್ಥಿನಿಯರು, ಗೃಹಿಣಿಯರು ಭಾಗವಹಿಸಲಿರುವರು. ೆ.12ರಂದು ನಡೆಯುವ ಪವರ್ ಸಮ್ಮೇಳನದ ಪೂರ್ವಭಾವಿಯಾಗಿ ಈ ನಡಿಗೆ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ರಿತು ಚಬ್ರಿಯಾ, ಸುಪ್ರಿಯಾ ಕಾಮತ್, ಪೂಜನ್ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News