ಬಾಲಕಿ ನಾಪತ್ತೆ: ದೂರು ದಾಖಲು
Update: 2017-02-03 00:09 IST
ಮಂಗಳೂರು, ಫೆ.2: ಬಾಲಕಿ ಯೋರ್ವಳು ನಾಪತ್ತೆಯಾಗಿರುವ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲೆಟ್ಟಿ ಗ್ರಾಮದ ಅರಂಬೂರು ನಿವಾಣಿ ಎಂಬವರ ಮಗಳು ಆಶಿಕಾ (14)ನಾಪತ್ತೆಯಾದ ಬಾಲಕಿ. ಮನೆಯಲ್ಲಿದ್ದ ಈಕೆ ಜ.25ರಂದು ಚೀಟಿ ಬರೆದಿಟ್ಟು ಕಾಣೆಯಾಗಿರುತ್ತಾಳೆ ಎಂದು ತಿಳಿದು ಬಂದಿದೆ. ಈಕೆ 5 ಅಡಿ ಎತ್ತರ, ಗೋಧಿ ಮೈಬಣ್ಣ, ಕನ್ನಡ, ತುಳು ಭಾಷೆ ಮಾತಾಡುತ್ತಾಳೆ. ರಿಂಗ್ ತರಹದ ಮೂಗುತಿ, ಕಿವಿಗಳಲ್ಲಿ ರೋಲ್ಡ್ ಗೋಲ್ಡ್ ಆಭರಣ ಮತ್ತು ಕುತ್ತಿಗೆಯಲ್ಲಿ ರೋಲ್ಡ್ ಗೋಲ್ಡ್ ಚೈನ್ ಇರುತ್ತದೆ. 9ನೆ ತರಗತಿ ವ್ಯಾಸಂಗ ಮಾಡಿಕೊಂಡಿದ್ದು, ಇವರನ್ನು ಸಾರ್ವಜನಿಕರು ಕಂಡಲ್ಲಿ ಸುಳ್ಯ ಪೋಲಿಸ್ ಠಾಣೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.