ಯುವತಿ ನಾಪತ್ತೆ: ದೂರು
Update: 2017-02-03 00:10 IST
ಪುತ್ತೂರು, ಫೆ.2: ಸ್ವಸಹಾಯ ಸಂಘದ ಸಭೆೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಯುವತಿಯೋರ್ವಳು ನಾಪತ್ತೆಯಾದ ಘಟನೆ ವರದಿಯಾಗಿದೆ.
ಪುತ್ತೂರು ತಾಲೂಕಿನ ಕಬಕ ಗ್ರಾಮದ ಕೂವೆತ್ತಿಲ ನಿವಾಸಿ ಸೇಸಪ್ಪಅವರ ಪುತ್ರಿ ರೇವತಿ(22) ನಾಪತ್ತೆಯಾದ ಯುವತಿ. ಜ.29ರಂದು ರೇವತಿ ಸ್ವಸಹಾಯ ಸಂಘದ ಸಭೆೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ಮರಳಿ ಮನೆಗೆ ಬಂದಿಲ್ಲ. ಸಂಬಂಧಿಕರ ಮನೆ ಸಹಿತ ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಆಕೆಯ ತಾಯಿ ನೀಲಮ್ಮ ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಭಾವ ಚಿತ್ರದಲ್ಲಿ ಕಾಣುವ ಯುವತಿಯನ್ನು ಯಾರಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ನಗರಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.