ತಾಯಿ-ಮಗು ನಾಪತ್ತೆ

Update: 2017-02-02 18:44 GMT

 ಮಣಿಪಾಲ, ಫೆ.2: ಶಿವಳ್ಳಿ ಗ್ರಾಮದ ಪೆರಂಪಳ್ಳಿ ನಿವಾಸಿ ಪ್ರವೀಣ್‌ಚಂದ್ರ ಎಂಬವರ ಪತ್ನಿ ವಿದ್ಯಾಲಕ್ಷ್ಮೀ (39) ಹಾಗೂ ಮಗ ಅಂಶುಲ್(6) ಫೆ.1ರಂದು ಮಧ್ಯಾಹ್ನ ನಾಪತ್ತೆಯಾಗಿರುವುದಾಗಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಗ್ಗೆ 11ಗಂಟೆ ವೇಳೆ ಮಗನನ್ನು ಶಾಲೆಯಿಂದ ಕರೆದುಕೊಂಡು ಬರುವುದಾಗಿ ಹೇಳಿ ಹೋದ ವಿದ್ಯಾಲಕ್ಷ್ಮೀ ಮಗನೊಂದಿಗೆ ಕಾಣೆಯಾಗಿದ್ದಾರೆ. ವಿದ್ಯಾಲಕ್ಷ್ಮಿ ಸಾಧಾರಣ ಶರೀರ, ಬಿಳಿ ಮೈಬಣ್ಣ, ಜೀನ್ಸ್ ಪ್ಯಾಂಟ್ ಹಾಗೂ ಟಾಪ್ ಧರಿಸಿದ್ದಾರೆ. ಅವರು ಕನ್ನಡ, ತುಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲವರಾಗಿದ್ದಾರೆ. ಅಂಶುಲ್ ಸಪೂರ ಶರೀರ, ನೀಲಿ ಶಾಟ್ಸ್, ಆಕಾಶ ನೀಲಿ ಬಣ್ಣದ ಶರ್ಟ್ ಧರಿಸಿದ್ದು, ತುಳು, ಇಂಗ್ಲಿಷ್ ಭಾಷೆ ತಿಳಿದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News