×
Ad

ನಾಳೆ ಎಐಎಂಐಟಿನಲ್ಲಿ ಉದ್ಯೋಗ ಮೇಳ

Update: 2017-02-03 00:12 IST

ಮಂಗಳೂರು, ಫೆ.2: ಸಂತ ಅಲೋಶಿಯಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಇನ್‌ಫಾರ್ಮೇಶನ್ ಟೆಕ್ನಾಲಜಿ, ಬೀರಿ, ಮಂಗಳೂರು ಇವರು ಸಹಯೋಗದೊಂದಿಗೆ ಉದ್ಯೋಗಾಕಾಂಕ್ಷಿಗಳಿಗಾಗಿ 2017, ಫೆ.4ರಂದು ಉದ್ಯೋಗ ಮೇಳವನ್ನು ಏರ್ಪಡಿಸಿದೆ.

ಈ ಮೇಳವು ಮಂಗಳೂರು ಬೀರಿಯ ಕೋಟೆಕಾರ್ ಮಾಡೂರಿನ ಎಐಎಂಐಟಿ ಕಾಲೇಜಿನಲ್ಲಿ ಜರಗಲಿರುವುದು. ಇನ್‌ಫೋಸಿಸ್,  

ಐಸಿಐಸಿಐ ಬ್ಯಾಂಕ್, ರೋಬೊಸಾಫ್ಟ್ ಟೆಕ್ನಾಲೊಜಿಸ್, ಕೆನರಾ ಬ್ಯಾಂಕ್ ಲಿ, ಹಿಂದುಜಾ ಗ್ಲೋಬಲ್ ಲಿ. ಮುಂತಾದ 25 ಪ್ರಖ್ಯಾತ ಸಂಸ್ಥೆಗಳು ಭಾಗವಹಿಸಲಿರುವರು. ಪದವೀಧರರು, ಪಿಜಿ, ಬಿ.ಇ., ಬಿ.ಟೆಕ್, ಫಾರ್ಮಸಿ, ಯುಜಿ/ಐಟಿಐ/ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ 29 ವರ್ಷದ ಒಳಗಿನ, ಅನುಭವವಿರದ/2ವರ್ಷಗಳ ಅನುಭವವಿರುವ ಅಭ್ಯರ್ಥಿಗಳು ಭಾಗವಹಿಸಬಹುದು. ಸಾಫ್ಟ್‌ವೇರ್ ಡೆವಲಪರ್, ಐಟಿ ಟ್ರೈನಿ, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಸಿವಿಲ್, ಫೈನಾನ್ಸ್, ಅಕೌಂಟ್ಸ್, ಆಪರೇಶನ್ಸ್, ಎಚ್‌ಆರ್, ಫೈನಾನ್ಸ್, ರಿಕ್ರೂಟರ್, ಫೆಸಿಲಿಟಿ ಎಕ್ಸಿಕ್ಯೂಟಿವ್, ಸೇಲ್ಸ್, ಮಾರ್ಕೆಟಿಂಗ್, ಕಸ್ಟಮರ್, ಬಿಪಿಒ, ಐಟಿಇಎಸ್, ಕೆಪಿಎಸ್, ಬ್ಯಾಕ್ ಆಫೀಸ್, ಡಾಟಾ ಎಂಟ್ರಿ, ಡಿಜಿಟಲ್ ಮಾರ್ಕೆಟಿಂಗ್, ರಿಟೈಲ್ ಸೇಲ್ಸ್, ಸೇಲ್ಸ್ ಕೊ ಆರ್ಡಿನೇಟರ್ಸ್‌, ರಿಸರ್ಚ್ ಎಕ್ಸಿಕ್ಯೂಟಿವ್, ಮ್ಯಾನೇಜ್‌ಮೆಂಟ್ ಟ್ರೈನಿ, ಬಿಸ್ನೆಸ್ ಡೆವಲಪ್‌ಮೆಂಟ್, ಐಟಿ ಹೆಲ್ಪ್‌ಡೆಸ್ಕ್, ಟೆಕ್ನಿಕಲ್ ಸಪೊರ್ಟ್, ವೆಬ್ ಡೆವಲಪರ್, ಗ್ರಾಫಿಕ್ ಡಿಸೈನರ್, ಕಂಟೆಂಟ್ ಎಡಿಟರ್ ಮುಂತಾದ ಸ್ಥಾನಗಳಿಗೆ ಆಯ್ಕೆ ನಡೆಯಲಿರುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News