ಇಂದು ಮಹಿಳಾ ಸಮಾವೇಶ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ಅಭಿಯಾನದ ಸಮಾರೋಪ
ಮಂಗಳೂರು, ಫೆ.2: ‘ಭಾರತದಲ್ಲಿ ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ‘ಯುನಿವ್ೆ ಕರ್ನಾಟಕ’ ವತಿಯಿಂದ ನಡೆಯುತ್ತಿರುವ ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ ಸಮಾರಂಭವು ೆ.3ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಅಭಿಯಾನ ಸಂಚಾಲಕ ಸಲೀಮ್ ಮಲಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಥಮ ಅಧಿವೇಶನದಲ್ಲಿ ಸಂಜೆ 4:30ರಿಂದ 6:30ರವರೆಗೆ ಮಹಿಳಾ ಸಮಾವೇಶ ಆಯೋಜಿಸಲಾಗಿದ್ದು, ‘ಶರೀಅತ್, ರಸೂಲ್ ಔರ್ ಔರತ್’ ಮತ್ತು ‘ಮಹಿಳೆಯರ ಹೊಣೆಗಾರಿಕೆಗಳು’ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ದ್ವಿತೀಯ ಅಧಿವೇಶನ ಸಮಾರೋಪ ಸಮಾರಂಭ ನಡೆಯಲಿದ್ದು, 6:30ರಿಂದ 9ರವರೆಗೆ ‘ನಾಗರಿಕ ಕಾನೂನು ಹಾಗೂ ಸಾಮಾಜಿಕ ನ್ಯಾಯ ಮತ್ತು ಪ್ರವಾದಿ (ಸ)’ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದೇ ಸಂದರ್ಭ ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ರಚಿಸಿದ ‘ಮನುಕುಲದ ಪ್ರವಾದಿ ಹ. ಮುಹಮ್ಮದ್ (ಸ)’ ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಯುನಿವೆಫ್ ರಾಜ್ಯ ಕಾರ್ಯದರ್ಶಿ ಯು. ಕೆ. ಖಾಲಿದ್, ಉಳ್ಳಾಲ ಶಾಖಾ ಸದಸ್ಯ ಸಬೀಲ್ ಅಹ್ಮದ್, ಬೆಂಗರೆ ಶಾಖಾ ಸಂಚಾಲಕ ಇ್ರಾಝ್ ಹಸನ್, ಕುದ್ರೋಳಿ ಶಾಖಾ ಸದಸ್ಯ ಅಬ್ದುರ್ರಹ್ಮಾನ್ ಉಪಸ್ಥಿತರಿದ್ದರು.