×
Ad

ಕೇರಳದಲ್ಲಿ ಕೆಎಸ್ಸಾರ್ಟಿಸಿ ಬಸ್ ನೌಕರರ ಮುಷ್ಕರ

Update: 2017-02-03 10:14 IST

ಕಾಸರಗೋಡು, ಫೆ.3: ವೇತನ ಮೊಟಕು ಹಿನ್ನೆಲೆಯಲ್ಲಿ ಕೇರಳದ ಕೆಎಸ್ಸಾರ್ಟಿಸಿ ನೌಕರರು ಶುಕ್ರವಾರ ಮುಷ್ಕರ ನಡೆಸುತ್ತಿದ್ದು, ಕಾಸರಗೋಡಿನಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ.

ಕೆಎಸ್ಸಾರ್ಟಿಸಿ  ಬಸ್ಸುಗಳು ಮಾತ್ರ ಸಂಚರಿಸುವ ರಸ್ತೆಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿದ್ದು, ಖಾಸಗಿ ವಾಹನಗಳನ್ನು ಅವಲಂಬಿಸುವಂತಾಗಿದೆ.

ಕಳೆದ ಎರಡು ತಿಂಗಳಿಂದ ಕೆಎಸ್ಸಾರ್ಟಿಸಿ ಬಸ್ಸು ನೌಕರರಿಗೆ ವೇತನ ಹಾಗೂ ಪಿಂಚಣಿ ಮೊಟಕುಗೊಳಿಸಿದ್ದನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News