×
Ad

​ಮೋಟರ್ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಧರಣಿ

Update: 2017-02-03 12:14 IST

ಮಂಗಳೂರು, ಫೆ.3: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಮೋಟರ್ ಕಾಯ್ದೆ ಹಾಗೂ ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಉಳ್ಳಾಲ, ಗುರುಪುರ,ಸುರತ್ಕಲ್,ಮಂಗಳೂರು ನಗರ ಉತ್ತರ ಮತ್ತು ದಕ್ಷಿಣ ಘಟಕಗಳ ವತಿಯಿಂದ ನಗರದ ಆರ್‌ಟಿಒ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ದ.ಕ.ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಮ್ ಕೋಡಿಜಾಲ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಮಮತಾ ಗಟ್ಟಿ, ದ.ಕ.ಜಿಲ್ಲಾ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಪದ್ಮನಾಭ ನರಿಂಗಾನ, ಮಾಜಿ ಮೇಯರ್ ಕೆ.ಅಶ್ರಫ್ ಕೇಂದ್ರ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮಾತನಾಡಿದರು.

ಧರಣಿಯಲ್ಲಿ ಪಕ್ಷದ ಮುಖಂಡರಾದ ಮಾಜಿ ಮೇಯರ್ ಹಿಲ್ಡಾ ಆಳ್ವ, ಟಿ.ಕೆ.ಸುಧೀರ್, ನಾಗೇಂದ್ರ ಕುಮಾರ್, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಹರ್ಷರಾಜ್ ಮುದ್ಯ, ಶಬ್ಬೀರ್ ಸಿದ್ದಕಟ್ಟೆ, ಜಯಶೀಲ ಅಡ್ಯಂತಯ, ನಝೀರ್ ಬಜಾಲ್, ಸಂತೋಷ ಕುಮಾರ್ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಆರ್.ಕೆ. ಪೃಥ್ವಿರಾಜ್, ಪ್ರಕಾಶ್ ಸಾಲ್ಯಾನ್, ಅಖಿಲಾ ಆಳ್ವ, ಎಸ್. ಅಬ್ಬಾಸ್, ನಿತ್ಯಾನಂದ ಶೆಟ್ಟಿ, ಚೇತನ್ ಬೋಳೂರು, ಆರೀಫ್ ಬಂದರ್, ರೆಹ್ಮಾನ್ ಕೋಡಿಜಾಲ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News