ಕರಾವಳಿ ಲಾರಿ ಮಾಲಕರ ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ ಐವನ್ ಡಿಸೋಜಾ
Update: 2017-02-03 15:57 IST
ಕರ್ನಾಟಕದಲ್ಲಿರುವ ಲಾರಿ ಮಾಲಕರು ಇತ್ತೀಚಿನ ದಿನಗಳಲ್ಲಿ ಬಾಡಿಗೆ ಇಲ್ಲದೆ ಮತ್ತು ಇತರ ರಾಜ್ಯಗಳಿಂದ ಬರುವ ಲಾರಿಗಳಿಂದ ಕರ್ನಾಟಕದಲ್ಲಿರುವ ಲಾರಿ ಮಾಲಿಕರಿಗೆ ಬಾಡಿಗೆ ಇಲ್ಲದೇ ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದು, ಅನೇಕ ಬಾರಿ ಮನವಿಗಳನ್ನು ನೀಡಿದರೂ ಯಾವುದೇ ಪರಿಹಾರ ಕಂಡುಕೊಳ್ಳದೇ ಇರುವುದರಿಂದ ಈ ಬಗ್ಗೆ ಸರ್ಕಾರದ ಗಮನವನ್ನು ಸೆಳೆಯಬೇಕೆಂದು, ಕರ್ನಾಟಕ ಕರಾವಳಿ ಲಾರಿ ಮಾಲಕರ ನಿಯೋಗ ಸರಕಾರಿ ಮುಖ್ಯ ಸಚೇತಕ ಐವನ್ ಡಿ’ಸೋಜಾರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರಾವಳಿ ಕರ್ನಾಟಕ ಲಾರಿ ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ಐವನ್ ಡಿ’ ಸೋಜಾ ನೇಮಕ ಮಾಡಿದರು.
ಈ ಸಂದರ್ಭದಲ್ಲಿ ಕಿರಣ್ ಶೆಟ್ಟಿ ಮಂಗಳಾದೇವಿ, ಮೆಲ್ವಿನ್ ಲೋಬೋ, ಕೆ.ಬಿ. ಸೃಜನ್, ಸಚಿನ್ ಕುಳಾಯಿ, ಸಲಾಂ, ಸಂತೋಷ್ ಸುವರ್ಣ, ನಾಗೇಂದ್ರ ಕುಮಾರ್, ಕರೀಂ, ಸುನಿಲ್ ಶೆಟ್ಟಿ ಮಂಗಳಾದೇವಿ ಮುಂತಾದವರು ಉಪಸ್ಥಿತರಿದ್ದರು.