ಇವಾಂಜಲಿನ್ ಸಿಂಪ್ಸನ್ ಸೋನ್ಸ್ ನಿಧನ
ಮಂಗಳೂರು, ಫೆ. 3: ಹಿರಿಯ ಕಮ್ಯೂನಿಸ್ಟ್ ನೇತಾರ, ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಹಾಗೂ ಸ್ವಾತಂತ್ರ ಹೋರಾಟಗಾರರಾಗಿದ್ದ ಕಾಮ್ರೇಡ್ ಸಿಂಪ್ಸನ್ ಸೋನ್ಸ್ ಅವರ ಪತ್ನಿ ಇವಾಂಜಲಿನ್ ಸಾರ ಸೋನ್ಸ್ (94) ಅಲ್ಪ ಕಾಲದ ಅಸ್ವಸ್ಥೆಯ ನಂತರ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಅವರು ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಕಾ.ಸಿಂಪ್ಸನ್ ಸೋನ್ಸ್ ಅವರು ಸುಮಾರು ಹನ್ನೊಂದು ವರ್ಷದ ಹಿಂದೆ ಅಗಲಿದ್ದರು. ಸ್ವಾತಂತ್ರ ಸಂಗ್ರಾಮದೊಂದಿಗೆ ಕಾರ್ಮಿಕ ಚಳವಳಿಯಲ್ಲಿ ನಿರತರಾಗಿದ್ದ ಸಿಂಪ್ಸನ್ ಸೋನ್ಸ್‌ರಿಗೆ ಇವಾಂಜಲಿನ್ ಸಾರಾ ಸೋನ್ಸ್ ಅವರು ಸರ್ವ ವಿಧದಲ್ಲೂ ಸಹಕರಿಸಿದ ಸಂಗಾತಿಯಾಗಿದ್ದರು. ಶನಿವಾರ ಸಂಜೆ 4 ಗಂಟೆಗೆ ಮಂಗಳೂರಿನ ಗೋರಿಗುಡ್ಡೆ ಸೆಮೆಟ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ಸಿಪಿಐ ಪ್ರಕಟನೆ ತಿಳಿಸಿದೆ.
ಸಂತಾಪ: ಮೃತರ ಅಗಲಿಕೆಗೆ ಭಾರತ ಕಮ್ಯುನಿಸ್ಟ್ ಪಕ್ಷದ ದ.ಕ. ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಜಿಲ್ಲಾ ನಾಯಕರಾದ ಬಿ.ವಿಶ್ವನಾಥ ನಾಯ್ಕಾ, ಬಿ.ಕೆ ಕೃಷ್ಣಪ್ಪ, ಪಿ. ಸಂಜೀವ, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ಭಟ್, ಕಾರ್ಯದರ್ಶಿ ಎಚ್. ರಾವ್, ಸಿಪಿಐ ಮಂಗಳೂರು ಕಾರ್ಯದರ್ಶಿ ವಿ.ಎಸ್ ಬೇರಿಂಜ, ಸಿಪಿಐ ಬಂಟ್ವಾಳ ಕಾರ್ಯದರ್ಶಿ ಬಿ. ಶೇಖರ್, ಪಕ್ಷದ ನಾಯಕರಾದ ಎಂ.ಕರುಣಾಕರ್, ಸುರೇಶ್ ಕುಮಾರ್, ಶಿವಪ್ಪ ಕೋಟ್ಯಾನ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.