"ನಿಮ್ಮ ರಹಸ್ಯಗಳನ್ನು ಬಹಿರಂಗಪಡಿಸುವೆ": ಸಮಾಜವಾದಿ ವಕ್ತಾರೆಗೆ ಬೆದರಿಕೆಯೊಡ್ಡಿದ ಬಿಜೆಪಿ ವಕ್ತಾರ
ಹೊಸದಿಲ್ಲಿ,ಫೆ.3: ನಿಮ್ಮ ರಹಸ್ಯಗಳನ್ನೆಲ್ಲ ಬಹಿರಂಗಪಡಿಸಿ ಮಾನಕಳೆಯುವೆ ಎಂದು ಸಮಾಜವಾದಿ ಪಾರ್ಟಿ ಮಹಿಳಾ ವಕ್ತಾರೆಗೆ ಬಿಜೆಪಿ ವಕ್ತಾರ ಬೆದರಿಕೆ ಹಾಕಿದ್ದಾರೆ.
ಟಿವಿ ಚ್ಯಾನೆಲ್ ಚರ್ಚೆ ವೇಳೆ ಎಸ್ಪಿಯ ವಕ್ತಾರೆ ಪಾಂಖುರಿ ಪಾಠಕ್‌ಗೆ ಬಿಜೆಪಿ ವಕ್ತಾರ ಪ್ರೇಂ ಶುಕ್ಲಾ ಬೆದರಿಕೆ ಒಡ್ಡಿದ್ದು" ದೊಡ್ಡ ಜನ ಆಗಲು ಪ್ರಯತ್ನಿಸಿದರೆ ರಹಸ್ಯಗಳನ್ನೆಲ್ಲ ಬಹಿರಂಗಪಡಿಸಿ ನಿಮ್ಮ ಮಾನ ಕಳೆಯುವೆ. ಯಾದವ್ ಕುಟುಂಬರಾಜಕೀಯದಲ್ಲಿ ಮೇಲೆ ಬರಲು ಹೇಗೆ ಮಹಿಳೆಯರನ್ನು ಬಳಕೆ ಮಾಡುತ್ತಿದೆ ಎಂದು ನನಗೆಗೊತ್ತು" ಎಂದು ಕೀಳುಮಟ್ಟದ ಮಾತಾಡಿದ್ದಾರೆ.
ಶುಕ್ಲಾ ಹೇಳಿಕೆ ವಿರುದ್ಧ ಪೊಲೀಸರಿಗೆ ಪಾಂಖುರಿ ಪಾಠಕ್ ದೂರು ನೀಡಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗಕ್ಕೂ ದೂರು ನೀಡಲಿದ್ದೇನೆ ಎಂದು ತಿಳಿಸಿದ್ದಾರೆ.
ಶುಕ್ಲ ಇಂತಹ ಅವಮಾನಕಾರಿ ಹೇಳಿಕೆ ಈ ಹಿಂದೆಯೂ ನೀಡಿದ್ದರು. ರಾಜಕೀಯ ಚರ್ಚೆಗಳನ್ನು ವೈಯಕ್ತಿಕ ಆರೋಪಗಳಿಗೆ ಬಳಕೆ ಮಾಡುತ್ತಿದ್ದಾರೆಂದು ಇದು ಅವರ ಸ್ವಭಾವವಾಗಿದೆ ಎಂದು ಪಥಕ್ ಆರೋಪಿಸಿದ್ದಾರೆ. ಪ್ರೇಂಶುಕ್ಲಾರನ್ನು ಬಿಜೆಪಿ ಪಕ್ಷದಿಂದ ತೆಗೆದುಹಾಕಬೇಕೆಂದು ಅವರು ಆಗ್ರಹಿಸಿದ್ದಾರೆಂದು ವರದಿ ತಿಳಿಸಿದೆ.