×
Ad

ಝಕಾತ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು: ಮನಪಾ ಆಯುಕ್ತ ಮುಹಮ್ಮದ್ ನಝೀರ್

Update: 2017-02-03 19:16 IST

ಮಂಗಳೂರು, ಫೆ.3: ಇಸ್ಲಾಮ್‌ನಲ್ಲಿ ಅತ್ಯಂತ ಕ್ರಮಬದ್ಧವಾದ ಝಕಾತ್ ವ್ಯವಸ್ಥೆ ಇದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ಮುಸ್ಲಿಮ್ ಸಮಾಜ ಎದುರಿಸುತ್ತಿರುವ ಬಡತನ, ನಿರುದ್ಯೋಗ, ಶಿಕ್ಷಣ, ಆರೋಗ್ಯ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ಹೇಳಿದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಟಿಆರ್‌ಎಫ್ ಸಭಾಂಗಣದಲ್ಲಿ ‘ಸಾಚಾರ್ ವರದಿ ಹತ್ತು ವರ್ಷಗಳ ನಂತರ’ ಎಂಬ ವಿಷಯದಲ್ಲಿ ಶುಕ್ರವಾರ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಸ್ಲಿಂ ಸ್ನಾತಕೋತ್ತರ ಪದವೀಧರರ ಅಸೋಸಿಯೇಶನ್‌ನ ಅಧ್ಯಕ್ಷ ಪ್ರೊ. ಅಬ್ದುಲ್ ರಹ್ಮಾನ್ ಅಧ್ಯಕ್ಷತೆ ವಹಿಸಿದ್ದರು.

ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.

ಟಿಆರ್‌ಎಫ್ ಸಲಹೆಗಾರ ರಫೀಕ್ ಮಾಸ್ಟರ್ ಸಂವಾದ ನಡೆಸಿಕೊಟ್ಟರು.

ವೇದಿಕೆಯಲ್ಲಿ ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು, ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ, ಬಿ.ಎ.ಅಕ್ಬರಲಿ ಉಪಸ್ಥಿತರಿದ್ದರು.

ಬಿಐಟಿ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಮುಹಮ್ಮದ್ ಮುಸ್ತಫಾ ಬಸ್ತಿಕೋಡಿ ಸ್ವಾಗತಿಸಿದರು.

ಪಿ.ಎ.ಕಾಲೇಜಿನ ಎಂಬಿಎ ಮುಖ್ಯಸ್ಥ ಪ್ರೊ.ಬೀರಾನ್ ಮೊಯ್ದಿನ್ ದಿಕ್ಸೂಚಿ ಭಾಷಣ ಮಾಡಿದರು.

ವಿದ್ಯಾರ್ಥಿ ಬಾಸಿತ್ ಹುಸೈನ್ ಕಿರಾಅತ್ ಪಠಿಸಿದರು.

ಮುಸ್ಲಿಂ ಸ್ನಾತಕೋತ್ತರ ಪದವೀಧರರ ಅಸೋಸಿಯೇಶನ್‌ನ ಉಪಾಧ್ಯಕ್ಷ ಹೈದರ್ ಅಲಿ ವಂದಿಸಿದರು.

ಟಿಆರ್‌ಎಫ್ ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News