×
Ad

ನೀರು ಸರಬರಾಜು, ಯುಜಿಡಿ ಕಾಮಗಾರಿಗೆ ಸಮಯ ಮಿತಿ ಇರಲಿ : ಸಚಿವ ರೋಷನ್ ಬೇಗ್

Update: 2017-02-03 20:02 IST

ಉಡುಪಿ, ಫೆ.3: ಶೀಘ್ರವಾಗಿ ಬೆಳೆಯುತ್ತಿರುವ ಉಡುಪಿಗೆ ಒಳಚರಂಡಿ (ಯುಜಿಡಿ-ಅಂಡರ್‌ಗ್ರೌಂಡ್ ಡ್ರೈನೇಜ್) ವ್ಯವಸ್ಥೆ ಅತ್ಯಗತ್ಯವಾಗಿದ್ದು, ನಿಗದಿತ ಸಮಯದೊಳಗೆ ಯೋಜನೆಯ ಜಾರಿಗೆ ಕ್ರಮಕೈಗೊಳ್ಳುವಂತೆ ರಾಜ್ಯ ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಉಡುಪಿಗೆ ಭೇಟಿ ನೀಡಿದ ಸಚಿವರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆಯೋಜಿಸಲಾಗಿದ್ದ ಕೆಯುಐಡಿಎಫ್‌ಸಿ ವತಿಯಿಂದ ಕೈಗೊಳ್ಳ ಲಾಗುತ್ತಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ನೀರು ಪೂರೈಕೆ ಕಾಮಗಾರಿಗಳಿಗೆ ದೊರೆತ ಪ್ರೋತ್ಸಾಹ ಯುಜಿಡಿ ಕಾಮಗಾರಿಗಳಿಗೆ ದೊರೆಯದಿರುವ ಬಗ್ಗೆ ಹಾಗೂ ಈ ಸಂಬಂಧ ಅಧಿಕಾರಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಗರಸಭೆ ಪೌರಾಯುಕ್ತ ಮಂಜುನಾಥಯ್ಯ ಹಾಗೂ ಇತರ ಅಧಿಕಾರಿಗು ಸಚಿವರ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಡ್ಸೆಂಪ್ ಉಪ ಯೋಜನಾ ನಿರ್ದೇಶಕ ಪ್ರಭಾಕರ್ ಶರ್ಮ, ಯುಜಿಡಿ ಕಾಮಗಾರಿ ಅನುಷ್ಠಾನದ ವೇಳೆ ಭೂಮಿ ಖರೀದಿಗೆ ಹಾಗೂ ಯೋಜನೆಯ ಜಾರಿಯ ಬಳಿಕ ಐದು ವರ್ಷ ನಿರ್ವಹಣೆಗೆ ಹೊಸ ಎಡಿಬಿ ನೆರವಿನ ಕಾಮಗಾರಿಯಲ್ಲಿ ಅವಕಾಶವಿದ್ದು, ಜನರ ಮನವೊಲಿಸುವ ಕಾಮಗಾರಿಯನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಬೇಕೆಂದು ಅಭಿಪ್ರಾಯಪಟ್ಟರು.

ಈ ಸಂಬಂಧ ಫೆಬ್ರವರಿ ಮೊದಲ ವಾರದಲ್ಲಿ ಸಂಬಂಧಪಟ್ಟ ಜಾಗಗಳ ಮಾಲಕರ ಸಭೆಯನ್ನು ಕರೆಯಲಾಗಿದೆ ಎಂದು ಪೌರಾಯುಕ್ತರು ಮಾಹಿತಿ ನೀಡಿದರು.
ಎಡಿಬಿ ನೆರವಿನೊಂದಿಗೆ ಕರ್ನಾಟಕ ಇಂಟಿಗ್ರೇಟೆಡ್ ಅರ್ಬನ್ ವಾಟರ್ ಮ್ಯಾನೇಜ್‌ಮೆಂಟ್ ಇನ್ವೆಸ್ಟಮೆಂಟ್ ಪ್ರೋಗ್ರಾಂನಡಿ ಡಿಪಿಆರ್ ಸಲ್ಲಿಸಬೇಕಿದೆ. ಇದಕ್ಕಾಗಿ ಖಾಸಗಿ ಜಮೀನು ಮಾಲಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಅನುಷ್ಠಾನವಾಗಲಿದೆ. ಆದರೆ ಯುಜಿಡಿ ಸಮಸ್ಯೆ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ಎಡಿಬಿ ನೆರವಿನೊಂದಿಗೆ ಕರ್ನಾಟಕ ಇಂಟಿಗ್ರೇಟೆಡ್ ಅರ್ಬನ್ ವಾಟರ್ ಮ್ಯಾನೇಜ್‌ಮೆಂಟ್ ಇನ್ವೆಸ್ಟಮೆಂಟ್ ಪ್ರೋಗ್ರಾಂನಡಿ ಡಿಪಿಆರ್ ಸಲ್ಲಿಸಬೇಕಿದೆ. ಇದಕ್ಕಾಗಿ ಖಾಸಗಿ ಜಮೀನು ಮಾಲಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಕುಡಿಯುವ ನೀರು ಪೂರೈಕೆ ಯೋಜನೆಗಳ ಅನುಷ್ಠಾನವಾಗಲಿದೆ. ಆದರೆ ಯುಜಿಡಿ ಸಮಸ್ಯೆ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಸಾಧನೆ ಹಾಗೂ ಪ್ರಸಕ್ತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ಧನ ವಿವರಿಸಿ ದರು. ಇದುವರೆಗೆ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆದ ಕೆರೆಗಳ ಅಭಿವೃದ್ದಿ, ಇ-ಲೈಬ್ರೆರಿಗೆ ತಳ ಅಂತಸ್ತು ನಿರ್ಮಾಣ ಮುಂತಾದ ಕಾಮಗಾರಿಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಪ್ರಾಧಿಕಾರದ ಲೇಔಟ್ ನಿರ್ಮಾಣಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆಯನ್ನು ಅವು ಸಚಿವರ ಗಮನಕ್ಕೆ ತಂದರು.

ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಪೂರ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾತಿಲಕ್, ಸದಸ್ಯರಾದ ರಮೇಶ್ ಕಾಂಚನ್, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ವಾಯ್ಲಿನ್ ಡಿಸೋಜ, ಗಿರೀಶ್ ಉದ್ಯಾವರ, ನವೀನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ್‌ಪ್ರಭ ಉಪಸ್ಥಿತರಿದ್ದರು.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ ಸಚಿವರನ್ನು ಸ್ವಾಗತಿಸಿ,ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News