ಡೊನಾಲ್ಡ್ ಟ್ರಂಪ್ ಚಹಾಕೂಟದ ಪ್ರತಿನಿಧಿಯಾಗಿ ಭಾರತದ ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೋ
Update: 2017-02-03 21:14 IST
ಮಂಗಳೂರು.ಫೆ.3: ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚಹಾ ಕೂಟದ ಪ್ರತಿನಿಧಿಯಾಗಿ ಭಾರತದ ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೋ ಆಹ್ವಾನಿತರಾಗಿ ಭಾಗವಹಿಸಿದ್ದರು.
ಫೆ.2ರಂದು ಬೆ.7.30 ಗಂಟೆಗೆ ವಾಶಿಂಗ್ಟನ್ ಡಿ.ಸಿಯಲ್ಲಿರುವ ಅಮೇರಿಕಾದ ಅಧ್ಯಕ್ಷರ ಶ್ವೇತ ಭವನದಲ್ಲಿ ನಡೆದ ನ್ಯಾಷನಲ್ ಪ್ರೇಯರ್ ಚಹಾ ಕೂಟದಲ್ಲಿ ಅಮೇರಿಕಾದ ಕಾಂಗ್ರೆಸ್, ಸರಕಾರದ ಅಧಿಕಾರಿಗಳು ಹಾಗೂ 140 ದೇಶಗಳ ಪ್ರತಿನಿಧಿಗಳ ಜೊತೆ ಆಹ್ವಾನಿತರಾಗಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.