×
Ad

ಗೋವಾ ವಿಧಾನಸಭೆಗೆ ನಾಳೆ ಮತದಾನ

Update: 2017-02-03 21:50 IST

ಪಣಜಿ,ಫೆ.3: ಕಾವೇರಿದ ಚುನಾವಣಾ ಪ್ರಚಾರಕ್ಕೆ ಸಾಕ್ಷಿಯಾಗಿದ್ದ ಗೋವಾ ವಿಧಾನಸಭೆಯ ಎಲ್ಲಾ 40 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿರುವ ಗೋವಾದಲ್ಲಿ ಎಎಪಿ ಇದೇ ಮೊದಲ ಬಾರಿಗೆ ತನ್ನ ಅದೃಷ್ಟ ಪರೀಕ್ಷೆಗಿಳಿದಿದೆ. ಎಂಜಿಪಿ, ಶಿವಸೇನೆ ಹಾಗೂ ಜಿಎಸ್‌ಎಂ ಪಕ್ಷಗಳ ಮೈತ್ರಿಕೂಟ ಕೂಡಾ ಚುನಾವಣಾ ಕಣದಲ್ಲಿದೆ.

 40 ಸದಸ್ಯ ಬಲದ ಗೋವಾ ವಿಧಾನಸಭೆಗೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ 11 ಲಕ್ಷಕ್ಕೂ ಅಧಿಕ ಮಂದಿ ಮತಚಲಾಯಿಸುವ ಅರ್ಹತೆ ಹೊಂದಿದ್ದಾರೆ. ರಾಜ್ಯದ ಎಲ್ಲಾ 1642 ಮತಗಟ್ಟೆಗಳಲ್ಲಿ ನಾಳೆ ಏಳು ಗಂಟೆಗೆ ಮತದಾನ ಆರಂಭಗೊಳ್ಳಲಿದ್ದು, ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

 ಚುನಾವಣೆಯಲ್ಲಿ ಗೋವಾ ಮುಖ್ಯಮಂತ್ರಿ ಸೇರಿದಂತೆ 250 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾರ್ಚ್ 11ರಂದು ಮತಗಳ ಏಣಿಕೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಸಾವಿರಾರು ಪೊಲೀಸ್ ಹಾಗೂ ಅರೆಸೈನಿಕ ಪಡೆಗಳನ್ನು ಭದ್ರತಾ ಕಾರ್ಯಗಳಿಗೆ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News