ಇಖ್ರಾ ಅರೇಬಿಕ್ ಶಾಲೆಯ ವಾರ್ಷಿಕ ಸಮಾರಂಭ
ಮಂಗಳೂರು , ಫೆ. 3 : ಚಾರಿತ್ರ್ಯ ಪ್ರಮುಖ ವಿಚಾರವಾಗಿದೆ . ಮನುಷ್ಯನು ತನ್ನಲ್ಲಿ ಕೃತಜ್ಞತೆ ಹಾಗೂ ತ್ಯಾಗದ ಮನೋಭಾವವನ್ನು ಬೆಳೆಸಬೇಕಾಗಿದೆ . ಇಖ್ರಾ ಅರೇಬಿಕ್ ಶಾಲೆಯ ವಿದ್ಯಾರ್ಥಿಗಳ ಪ್ರತಿಭಾ ಪ್ರತಿರ್ಶನ ಬಹಳ ಪ್ರಭಾವಿತವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ಹೇಳಿದರು .
ಅವರು ಇಖ್ರಾ ಶಾಲೆಯ ವಾರ್ಷಿಕ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತದ್ದರು .
ಇಸ್ಲಾಂ ಶಿಕ್ಷಣಕ್ಕೆ ಬಹಳ ಪ್ರಾಮುಖ್ಯತೆ ನೀಡಿದೆ. ಇಖ್ರಾ ಶಾಲೆಯು ವಿದ್ಯಾರ್ಥಿಗಳಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಿ ಕಾಲದ ಸವಾಲನ್ನು ಎದುರಿಸಲು ಸಿದ್ಧಗೊಳಿಸುತ್ತಿದೆ ಎಂದು ಮುಖ್ಯ ಅತಿಥಿಯಾಗಿದ್ದ ಯೆನೆಪೋಯ ವಿಶ್ವ ವಿದ್ಯಾಲಯದ ಕುಲಪತಿ ಅಬ್ದುಲ್ಲಾ ಕುಂಞ ಹೇಳಿದರು.
ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ , ಮದ್ರಸದ ವಾಸ್ತವ ರೂಪ ಸಮಾಜದ ಮುಂದೆ ತರಬೇಕಾಗಿದೆ . ಈ ಕೆಲಸವನ್ನು ಇಖ್ರಾ ಶಾಲೆಯು ಪ್ರಾಯೋಗಿಕವಾಗಿ ನೆರವೇರಿಸುತ್ತಿದೆ ಎಂದು ಹೇಳಿದರು .
ಈ ಸಂದರ್ಭದಲ್ಲಿ ಇಖ್ರಾ ಶಾಲೆಯ ‘ ಇಂಸ್ಪೈರೀಶನ್ ‘ ಎಂಬ ತ್ರೈಮಾಸಿಕವನ್ನು ಬಿಡುಗಡೆಗೊಳಿಸಲಾಯಿತು .
ಮೌಲಾನಾ ಸಾಲಿಂ ನದ್ವಿ , ಮೌಲಾನಾ ದಾವೂದ್ ನದ್ವಿ ಉಪಸ್ಥಿತರಿದ್ದರು .
ಶಾಲೆಯ ಚೆಯರ್ ಮೆನ್ ಸಯ್ಯದ್ ಮುಹಮ್ಮದ್ ಬ್ಯಾರಿ ಅತಿಥಿಗಳನ್ನು ಸ್ವಾಗತಿಸಿದರು . ಹನೀಫ್ ಹಾಜಿ ವಂದಿಸಿದರು .