×
Ad

ರಸ್ತೆ ಗಾಮಗಾರಿಯ ಬ್ಯಾನರ್ ಗೆ ಹಾನಿ : ಯುವ ಕಾಂಗ್ರೆಸ್ ಪ್ರತಿಭಟನೆ

Update: 2017-02-03 23:00 IST

ಸುರತ್ಕಲ್, ಫೆ.3:  ಸುರತ್ಕಲ್ ನಲ್ಲಿ ಶಾಸಕ ಮೊಯ್ದಿನ್ ಬಾವಾ ಅವರ ದಕ್ಷ ಆಡಳಿತ ಹಾಗೂ ಷಟ್ಪಥ ರಸ್ತೆ ಗಾಮಗಾರಿಯ ನಿಮಿತ್ತ ಹಾಕಲಾಗಿದ್ದ ಬ್ಯಾನರ್ ಗಳಿಗೆ ಗುರುವಾರ ತಡರಾತ್ರಿ ಕಿಡಿಗೇಡಿಗಳು ಹಾನಿ ಮಾಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಸುರತ್ಕಲ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ನ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್  ಕಿಡಿಗೇಡಿಗಳ ದುಷ್ಕೃತ್ಯವನ್ನು ಖಂಡಿಸಿದರು.

ಇದೇ ವೇಳೆ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಮಾತನಾಡಿದರು.

ಈ ಸಂದರ್ಭ ಗಣೇಶ್ ಗುರುಪುರ, ಉಸ್ಮಾನ್ ಪ್ಯಾರಡೈಸ್, ಟಿ.ಎಮ್. ಅಬೂಬಕ್ಕರ್,  ಬಿ.ಎಮ್. ಅಬೂಬಕ್ಕರ್, ಹಕೀಂ ಫಾಲ್ಕನ್, ಕಾಂಗ್ರೆಸ್ ನ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News