ಮಂಜನಾಡಿ ಉರೂಸಿಗೆ ಚಾಲನೆ
ಕೊಣಾಜೆ , ಫೆ. 3 : ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿರವರ ಉರೂಸ್ ಕಾರ್ಯಕ್ರಮ ಫೆ.9ರಿಂದ 18ವರೆಗೆ ನಡೆಯಲಿದ್ದು , ಶುಕ್ರವಾರ ಅಸ್ಸಯ್ಯದ್ ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ಧ್ವಜಾರೋಹಣಗೈದು ಮಂಜನಾಡಿ ಉರೂಸ್‌ಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಇತಿಹಾಸ ಪ್ರಸಿದ್ದಿಯಾದ ಮಂಜನಾಡಿ ಸರ್ವ ಧರ್ಮಗಳ ಆಶಾ ಕೇಂದ್ರವಾಗಿ ಬೆಳೆದಿದ್ದು , ದಿನನಿತ್ಯ ಮಂಜನಾಡಿಯ ದರ್ಗಾ ಸನ್ನಿಧಿಗೆ ಸರ್ವಧರ್ಮಿಯರು ಝಿಯಾರತ್‌ಗೆ ಬರುತ್ತಿದ್ದು , ಅವರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಪಡೆದ ಉದಾಹರಣೆಗಳಿವೆ. ಇಂತಹ ಮಹಾನ್ ಚೈತನ್ಯವನ್ನು ಸ್ಮರಿಸುವುದು ಮತ್ತು ಮಂಜನಾಡಿ ಉರೂಸ್ ಯಶಸ್ವಿಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಮಾಜಿ ಅಧ್ಯಕ್ಷ ಅಲಿಕುಂಞ ಪಾರೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀರ್ ಪರ್ತಿಪ್ಪಾಡಿ, ಮಾಜಿ ಜಿ.ಪಂ ಸದಸ್ಯ ಎನ್.ಎಸ್ ಕರೀಂ, ಮಂಜನಾಡಿ ಜಮಾಅತ್ ಉಪಾಧ್ಯಕ್ಷ ಹಾಜಿ ಮೊಯ್ದಿನ್ ಬಸರ, ಕೋಶಾಧಿಕಾರಿ ಕುಂಞ ಬಾವ ಹಾಜಿ ಕಲ್ಕಟ್ಟ, ಜೊತೆ ಕಾರ್ಯದರ್ಶಿಗಳಾದ ಕೆ.ಎಂ.ಕೆ ಮಂಜನಾಡಿ, ಮಂಗಳಾಂತಿ ಬಾವು, ಆರ್ಥಿಕ ಸಮಿತಿ ಸದಸ್ಯರಾದ ಇಬ್ರಾಹೀಂ ಮೈಸೂರು, ಬಶೀರ್ ಮಂಜನಾಡಿ, ಅಶ್ರಫ್ ಎಡಂಬಲೆ ಉಪಸ್ಥಿತರಿದ್ದರು.