ವೃದ್ಧೆಗೆ ಬೆದರಿಕೆ: ದೂರು ದಾಖಲು
Update: 2017-02-04 00:28 IST
ಬಂಟ್ವಾಳ, ೆ.3: ಸಾಲ ನೀಡಿದ ಹಣವನ್ನು ವಾಪಸ್ ಕೇಳಿದ ಕಾರಣಕ್ಕೆ ವೃದ್ಧೆ ಯೊಬ್ಬರಿಗೆ ನಕಲಿ ಪತ್ರಕರ್ತನೊಬ್ಬ ಬೆದರಿಕೆ ಹಾಕಿರುವ ಬಗ್ಗೆ ಪುಂಜಾಲಕಟ್ಟೆ ಠಾಣೆ ಯಲ್ಲಿ ಶುಕ್ರವಾರ ದೂರು ದಾಖಲಾಗಿದೆ. ಬಸವನಗುಡಿಯ ಅಂತೋನಿ ರೊಡ್ರಿಗಸ್ ಎಂಬವರ ಪತ್ನಿ ಮೇರಿ(68) ದೂರು ನೀಡಿದ ವೃದ್ಧೆ. 7 ತಿಂಗಳ ಹಿಂದೆ ರಂಜಿತ್ ಎಂಬಾತ ಪತ್ರಕರ್ತನೆಂಬ ಸೋಗಿನಲ್ಲಿ ನಿಮ್ಮ ಎಲ್ಲಾ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿ 10,000 ರೂ. ಸಾಲದ ಪಡೆದುಕೊಂಡಿದ್ದ ಎನ್ನಲಾಗಿದೆ. ಇದನ್ನು ವಾಪಸ್ ಕೇಳಿದಾಗ ತನ್ನನ್ನು ಸತಾಯಿಸಿದ್ದಲ್ಲದೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ರುತ್ತಾನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಠಾಣಾ ಎಸ್ಸೆ ಚಂದ್ರಶೇಖರ ಮುಂದಿನ ಕ್ರಮ ಕೈಗೊಂಡಿದ್ದಾರೆ.