×
Ad

ಮಸ್ಜಿದ್ ಝೀನತ್ ಭಕ್ಷ್: ಸದಸ್ಯತ್ವ ಶುಲ್ಕ ಪಾವತಿಸಲು ಸೂಚನೆ

Update: 2017-02-04 13:42 IST

ಮಂಗಳೂರು, ಫೆ.4: ನಗರದ ಬಂದರ್‌ನಲ್ಲಿರುವ ಮಸ್ಜಿದ್ ಝೀನತ್ ಬಕ್ಷ್ ಮತ್ತು ಈದ್ಗಾ ಜುಮಾ ಮಸ್ಜಿದ್‌ನ ಮತದಾರರ ಪಟ್ಟಿಯನ್ನು ವಕ್ಫ್ ಸಂಸ್ಥೆಯು ಭಾಗಶಃ ಮಾರ್ಪಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಾರ್ಡ್ 1ರಿಂದ 25ರವರೆಗಿನ ಮುಸ್ಲಿಂ ಪುರುಷರು ಚುನಾವಣಾ ಆಯೋಗದ ಗುರುತಿನ ಚೀಟಿ (ವೋಟರ್ ಐಡಿ)ಯ ನಕಲು ಪ್ರತಿ, 2 ಸ್ಟಾಂಪ್ ಸೈಝ್ ಫೋಟೋ ಸದಸ್ಯತ್ವ ಶುಲ್ಕ 120 ರೂ. ಮತ್ತು ವಕ್ಫ್ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿಯ ಬಾಬ್ತು 50 ರೂ. ಸಹಿತ 170 ರೂ.ವನ್ನು ಫೆ.15ರೊಳಗೆ ಪಾವತಿಸಬೇಕು.

ಒಂದು ವೇಳೆ ಈ ಶುಲ್ಕ ಪಾವತಿಸದವರ ಹೆಸರನ್ನು ಜ.4ರ ಕರಡು ಮತದಾರರ ಪಟ್ಟಿಯಿಂದ ಕೈ ಬಿಡಲಾಗುವುದು ಮತ್ತು ಫೆ.27ರಂದು ಮತದಾರರ (ಸದಸ್ಯರ) ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಈ ಅಂತಿಮ ಪಟ್ಟಿಯಲ್ಲಿ ಹೆಸರಿರುವವರಿಗೆ ಮಾತ್ರ ಮತದಾನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ವಕ್ಫ್ ಸಂಸ್ಥೆಯು ನೀಡುವ ಗುರುತಿನ ಚೀಟಿಯನ್ನು ಮಾ.11ರಿಂದ 18ರೊಳಗೆ ಪಡೆಯಬಹುದು ಎಂದು ಮಸ್ಜಿದ್ ಝೀನತ್ ಬಕ್ಷ್‌ನ ಅಧ್ಯಕ್ಷರು ಮತ್ತು ಜಿಲ್ಲಾ ವಕ್ಫ್ ಅಧಿಕಾರಿಯ ಜಂಟಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News