×
Ad

ವಿಟ್ಲ : ಹಳೆ ವಿದ್ಯಾರ್ಥಿ ಸಂಘದ ದಶಮಾನೋತ್ಸವ

Update: 2017-02-04 17:14 IST

ವಿಟ್ಲ , ಫೆ. 4 :  ನೆಟ್ಲಮುಡ್ನೂರು ಗ್ರಾಮದ ಏಮಾಜೆಯ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಏಮಾಜೆ ಶ್ರೀ ದೇವಿ ಗೆಳೆಯರ ಬಳಗದ ದಶಮಾನೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ , ಸನ್ಮಾನ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು  ಏಮಾಜೆ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಮಾತನಾಡಿ , ಸರಕಾರ ಶಿಕ್ಷಣಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು , ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಶಿಕ್ಷಕರ ಪಾತ್ರ ಹೇಗೆ ಮಹತ್ತರವೋ ಅದೇ ರೀತಿ ಶಾಲೆಯ ಅಭಿವೃದ್ದಿಗೆ ಪೋಷಕರು ಹಾಗೂ ಊರವರ ಸಹಭಾಗಿತ್ವವೂ ಅತೀ ಅಗತ್ಯ ಎಂದವರು ಹೇಳಿದರು.

ಉದ್ಯಮಿ ಕಿಶೋರ್ ಡಿ. ಶೆಟ್ಟಿ ಮಂಗಳೂರು ಉದ್ಘಾಟಿಸಿದರು.

ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಕ್, ಉದ್ಯಮಿಗಳಾದ ಮಾಧವ ಮಾವೆ, ಬಾಲಕೃಷ್ಣ ಶೆಟ್ಟಿ ಅಮೈ ಪಾಂಡಿಬೆಟ್ಟು, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಆದಂ ಕುಂಞಿ,  ವಿಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷೆ ವಿಜಯ, ಅನಂತಾಡಿ ಗ್ರಾ.ಪಂ. ಅಧ್ಯಕ್ಷ ಸನತ್ ರೈ ತುಂಬೆಕೋಡಿ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಗೋಪಾಲಕೃಷ್ಣ ಭಟ್, ನೇರಳಕಟ್ಟೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಕುಶಲ ಎಂ. ಪೆರಾಜೆ, ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯರುಗಳಾದ ಶ್ರೀಧರ ರೈ ಕುರ್ಲೆತ್ತಿಮಾರು, ರಾಮಚಂದ್ರ ಶೆಟ್ಟಿ, ಸಮಿತಾ ಡಿ. ಪೂಜಾರಿ, ಲತೀಫ್ ನೇರಳಕಟ್ಟೆ, ಇಡ್ಕಿದು ಗ್ರಾ.ಪಂ. ರಮೇಶ್ ಪೂಜಾರಿ ಸೂರ್ಯ, ಚಲನಚಿತ್ರ ನಟ, ರಂಗ ಕಲಾವಿದ ಹಾಗೂ ಕಿರುತೆರೆ ನಟರುಗಳಾದ ಚೇತನ್‌ರೈ ಮಾಣಿ, ಅರವಿಂದ ಬೋಳಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನೆಟ್ಲಮುಡ್ನೂರು ಸೇವಾ ಪ್ರತಿನಿಧಿ ಶ್ವೇತಾ, ಏಮಾಜೆ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಅನಿತಾ, ಕಬಕ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೇಮಲತಾ, ಕೇಶವ ಆಳ್ವ ಕರಿಂಕ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ಗೌಡ, ಶಿಕ್ಷಕರುಗಳಾದ ತ್ರಿವೇಣಿ, ದಿವ್ಯ, ಶ್ರೀ ದೇವಿ ಗೆಳೆಯರ ಬಳಗದ ಅಧ್ಯಕ್ಷ ಜಯಾನಂದ ಪೂಂಜ ಕರಿಂಕ, ಸದಾಶಿವ ಶೆಟ್ಟಿ ದತ್ತಕೃಪಾ ಮಾಣಿ, ದೇರಣ್ಣ ಪೂಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ :

ಇದೇ ವೇಳೆ ಏಮಾಜೆ ಶಾಲಾ ಸಂಸ್ಥಾಪಕರಾದ ಭವಾನಿ ರೈ, ಭಾರತೀಯ ಭೂ ಸೇನಾ ಯೋಧ ಮೋಹನ್ ಗೌಡ, ಭರತನಾಟ್ಯ ಕಲಾವಿದೆ ಹಾಗೂ ನೃತ್ಯ ನಿರ್ದೇಶಕಿ ಕುಮಾರಿ ಚೈತ್ರ ಅವರನ್ನು ಸನ್ಮಾನಿಸಲಾಯಿತು. ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಪ್ರವೀಣ್ ಶೆಟ್ಟಿ ಸ್ವಾಗತಿಸಿದರು , ಏಮಾಜೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ಶೆಟ್ಟಿ ವಂದಿಸಿದರು. ಅರುಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News