×
Ad

ಪುಣೆ ಇನ್ಫೋಟೆಕ್ ಪಾರ್ಕ್‌ನ ಫ್ಲ್ಯಾಟಿನಲ್ಲಿ ಟೆಕ್ಕಿ ಆತ್ಮಹತ್ಯೆ!

Update: 2017-02-04 17:17 IST

ಪುಣೆ,ಫೆ.4: ಹಿಂಜಾವಾಡೆ ರಾಜೀವ್ ಗಾಂಧಿ ಇನ್ಫೊಟೆಕ್ ಪಾರ್ಕ್‌ನಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಉದ್ಯೋಗಿ ಅಭಿಷೇಕ್ ಕುಮಾರ್(23) ತನ್ನ ಫ್ಲ್ಯಾಟ್‌ನ ಫ್ಯಾನ್‌ಗೆ ನೇಣುಹಾಕಿ ಮೃತಪಟ್ಟಿದ್ದಾನೆ.

ಸಾಫ್ಟ್‌ವೇರ್ ಇಂಜಿನಿಯರ್ ಅಭಿಷೇಕ್ ಕಾನ್‌ಪುರದ ನಿವಾಸಿಯಾಗಿದ್ದು, ಗುರುವಾರ ಮಧ್ಯಾಹ್ನ ಘಟನೆ ಸಂಭವಿಸಿದೆ. ಒಂದೇ ಕೋಣೆಯಲ್ಲಿ ಇಬ್ಬರು ವಾಸವಿದ್ದು ತನ್ನ ರೂಮ್‌ಮೇಟ್‌ಗೆ ಅಭಿಷೇಕ್ ನಿದ್ದೆಬರುತ್ತಿದೆ ಎಂದು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದನು. ಸ್ವಲ್ಪಸಮಯದ ನಂತರ ಈತನ ರೂಮ್‌ಮೇಟ್ ಫೋನ್ ಮಾಡಿ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದನು.

ರೂಮ್‌ನ ಕಿಟಕಿಯಲ್ಲಿ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡು ಫ್ಯಾನ್‌ನಲ್ಲಿ ನೇತಾಡುವುದು ಕಂಡು ಬಂದಿತ್ತು. ನಂತರ ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಿಲ್ಲ. ಅಭಿಷೇಕ್ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದನು.

ಅಭಿಷೇಕ್ ಗೆಳೆಯನಿಗೆ ಆತ್ಮಹತ್ಯೆ ಪತ್ರ ಇತ್ಯಾದಿ ಕಳುಹಿಸಿರಬಹುದು ಎಂದು  ಪೊಲೀಸರು ಶಂಕಿಸಿದ್ದಾರೆ. ಪ್ರೇಮ ಸಂಬಂಧ ಕಡಿದಿದ್ದರಿಂದ ಆತ ನಿರಾಶನಾಗಿದ್ದ ಎನ್ನಲಾಗಿದೆ. ಆದರೆ ಆತ್ಮಹತ್ಯೆಯ ಕುರಿತ ಪತ್ರ ಘಟನಾ ಸ್ಥಳದಲ್ಲಿಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಮೃತದೇಹವನ್ನೊಪ್ಪಿಸಲಾಗಿದೆ. ರಾಜೀವ್ ಗಾಂಧಿ ಇನ್ಫೋಟೆಕ್‌ನಲ್ಲಿ ಮೃತಪಟ್ಟಿರುವ ಎರಡನೆ ಉದ್ಯೋಗಿ ಈತ. ಈ ಹಿಂದೆ ಕಲ್ಲಿಕೋಟೆಯ ರಸೀಲಾ ಎನ್ನುವ ಯುವತಿ ಇಲ್ಲಿ ಕೊಲೆಯಾಗಿದ್ದಳು ಎಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News