×
Ad

ಎರಡು ಕ್ಲಾಸ್ ರೂಂಗೆ 55 ಲಕ್ಷ ರೂ.ಖರ್ಚು!

Update: 2017-02-04 17:51 IST

ಅಂಬಲಪುಝ,ಫೆ.4: ಸರಕಾರಿ ಶಾಲೆಗೆ ನೀಡಲಾದ ಐವತ್ತೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಕೇವಲ ಎರಡು ಕ್ಲಾಸ್ ರೂಂಗಳನ್ನು ಮಾತ್ರ ಕಟ್ಟಿಸಲಾಗಿದೆ ಎಂದು ತಿಳಿದು ಸ್ಥಳೀಯ ಶಾಸಕರು, ಆಗಿರುವ ಕೇರಳ ಸಚಿವ ಜಿ. ಸುಧಾಕರನ್ ಕಟ್ಟಡ ನಿರ್ಮಾಣ ಉದ್ಘಾಟನೆಗೆ ನಿರಾಕರಿಸಿದ್ದಾರೆ.

ಒಂದು ವಾರದೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ತಾಂತ್ರಿಕ ಪರಿಕ್ಷಾಕಾರರಿಗೆ ಸೂಚಿಸಿದ್ದಾರೆ. ಅಂಬಲಪುಝ ಕೆ.ಕೆ. ಕುಂಞುಪಿಳ್ಳೆ ಸ್ಮಾರಕ ಸರಕಾರಿ ಹೈಯರ್ ಸೆಕೆಂಡರಿ ಸ್ಕೂಲ್‌ನಲ್ಲಿ ಘಟನೆನಡೆದಿದೆ.

ಸುಧಾಕರನ್ ನಿರ್ದೇಶ ಪ್ರಕಾರ ಸರಕಾರದ ಆಸ್ತಿ ಅಭಿವೃದ್ಧಿ ಫಂಡ್‌ನಿಂದ ಶಾಲೆ ಕಟ್ಟಡ ಕಟ್ಟಿಸಲು ಐವತ್ತೈದು ಲಕ್ಷ ರೂಪಾಯಿ ಅನುಮತಿಸಲಾಗಿತ್ತು. ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಎರಡು ಕ್ಲಾಸ್‌ರೂಂಗಳ ಕಟ್ಟಡ ನಕ್ಷೆ ಮಾಡಿಕೊಟ್ಟಿದ್ದರು.

ಗುತ್ತಿಗೆದಾರರಿಗೆ ಕಟ್ಟಡ ಕಟ್ಟಲು ವಹಿಸಿಕೊಡಲಾಗಿತ್ತು. ಕಟ್ಟಡ ನಿರ್ಮಾಣ ವರದಿ ಓದಿದ ಸಚಿವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ ಬಳಿಕವೇ ಶಂಕುಸ್ಥಾಪನೆ ಮಾಡಿದರೆ ಸಾಕೆಂದು ಹೇಳಿದರು. ಈಗಾಗಲೇ ಆರಂಭಿಸಿದ ಕಾಮಗಾರಿ ನಿಲ್ಲಿಸಬೇಕೆಂದು ಅವರು ಸೂಚಿಸಿದ್ದಾರೆ.

ಸ್ಥಳೀಯ ಶಾಸಕರಾಗಿದ್ದರೂ ಕಟ್ಟಡದ ರೂಪುರೇಷೆಯನ್ನು ತನಗೆ ತೋರಿಸಿರಲಿಲ್ಲ ಎಂದು ಸಚಿವರು ಪತ್ರಕರ್ತರಿಗೆ ತಿಳಿಸಿದ್ದಾರೆ. ಗ್ರಾಮಪಂಚಾಯತ್ ಅಧ್ಯಕ್ಷ ಜಿ. ವೇಣುಗೋಪಾಲನ್ ಮುಂತಾದ ಜನಪ್ರತಿನಿಧಿಗಳು ಉಪಸ್ಥಿತರಿದ್ದರೆಂದು ವರದಿತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News