×
Ad

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕೋತ್ಸವ ಸಮಾರಂಭ

Update: 2017-02-04 18:03 IST

 ಮಂಗಳೂರು , ಫೆ.4 : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 5 ನೇ ವರ್ಷದ ವಾರ್ಷಿಕಾಚರಣೆಯುಸಂಘದ ಪ್ರಧಾನ ಕಛೇರಿ ಬಳಿ ಸುಮನ ರೆಸ್ಸಿಡೆನ್ಸಿ ಹೋಟೆಲ್‌ನಲ್ಲಿ ಜರಗಿತು .

ಸಮಾರಂಭದ  ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ವಹಿಸಿದ್ದರು .  

ಪ್ರೊ .ಸುಧಾ ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾದ ಶ್ರೀ ಚಿತ್ತರಂಜನ್ ಬೊಳಾರ್ ರವರು ಸಂಘವು ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿ ,  ಈ ಯಶಸ್ಸು ಅಭಿವೃದ್ಧಿಗೆ   ಕಾರಣಕರ್ತರಾದ  ಗ್ರಾಹಕರು . ಅವರಿಂದಾಗಿ  14 ಶಾಖೆಗಳು ಕಾರ್ಯಾಚರಿಸುವಂತಾಯಿತು ಎಂದರು .

ಇ - ಸ್ಟಾಂಪಿಂಗ್ ಸೇವೆ, ಇತರ ಬ್ಯಾಂಕಿಂಗ್  ಸೇವೆ ನಗರದಲ್ಲಿ ದುಸ್ಥರವಾಗಿರುವ ಸಂದರ್ಭದಲ್ಲಿ ನಿರಂತರವಾಗಿ ಸಹಕಾರಿ ತತ್ವದ ಅಧಾರದ ಮೇಲೆ ಸಂಘವು ನೀಡಿರುವ ಸೇವೆಗೆ ಗ್ರಾಹಕರು ,ಸಿಬ್ಬಂದಿಗಳು ಎಲ್ಲಾ ನಿರ್ದೇಶಕರುಗಳ ಸೇವೆಯನ್ನು  ಇದೇ ಸಂದರ್ಭದಲ್ಲಿ ಸ್ಮರಿಸಿದರು.

ಸಂಘದ ಹಿರಿಯ ನಿರ್ದೇಶಕರುಗಳಾದ  ವಾಮನ್ ಕೆ , ರಾಮದಾಸ್ ಮರೋಳಿ ಹಾಗೂ ವಾಸ್ತು ಶಾಸ್ತ್ರಜ್ಞರಾದ ರಾಜ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿಬ್ಬಂಧಿಗಳ ಅತ್ಯುತ್ತಮ ಸೇವೆಗೆ ಉತ್ತಮ ಶಾಖೆ, ಉತ್ತಮ ಸ್ವಚ್ಛಶಾಖೆ , ನಿರಖು ಠೇವಣಿಯಲ್ಲಿ ಉತ್ತಮ ಸೇವೆಗೆ , ಆವರ್ತಠೇವಣಿ ವಿಭಾಗದಲ್ಲಿ ಉತ್ತಮ ಸೇವೆಗೆ, ಎಲ್.ಐ.ಸಿ ಲೈಫ್ ಇನ್ಸುರೆನ್ಸ್ ನಲ್ಲಿ ಉತ್ತಮ ಸೇವೆಗೆ, ರೆಲಿಗೇರ್ ಹೆಲ್ತ್ ಇನ್ಸುರೆನ್ಸ್ ನಲ್ಲಿ ಉತ್ತಮ ಸೇವೆಗೆ ,ಉತ್ತಮ ಗ್ರಾಹಕರ ಸೇವೆಗೆ, ಸಂಘದ ಇ-ಸ್ಟಾಂಪ್ ವಿಭಾಗದ ಉತ್ತಮ ಸೇವೆಗೆ, ಸಂಘದ ಉಳಿತಾಯ ಖಾತೆ ಯಲ್ಲಿ ಉತ್ತಮ ಸೇವೆ ನೀಡಿದ ಸಿಬ್ಬಂದಿಗಳಿಗೆ , ಶಾಖೆಗಳಿಗೆ ಫಲಕವನ್ನು ನೀಡಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ವಾಮನ್.ಕೆ , ರಾಮದಾಸ ಮರೋಳಿ  ಮಾತನಾಡಿದರು . 
        
‘ಎಲ್.ಐ.ಸಿ ಹಾಗೂ ರೆಲಿಗೇರ್ ಸಂಸ್ಥೆಯಿಂದ ಗ್ರಾಹಕರ ಸೇವೆಯ ಬಗ್ಗೆ ಚಿಂತನಮಂಥನ ಸಭೆಯನ್ನು ಕ್ರಮವಾಗಿ ಎಲ್.ಐ.ಸಿಯ ಪ್ರತಿನಿಧಿಗಳಾದ ಭೋಜರಾಜ್ ನಾಯಕ್ ,  ದಿನೇಶ್ ಹೆಗ್ಡೆ ಹಾಗೂ ರೆಲಿಗೇರ್ ಹೆಲ್ತ್ ಇನ್ಸೊರೆನ್ಸ ಪ್ರತಿನಿಧಿಗಳಾದ ವಸಂತ ಕುಮಾರ್, ವಿನೋದ್  ನಡೆಸಿಕೊಟ್ಟರು. 

ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ  ವಂದಿಸಿದರು.

                                                                                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News