ಸುರತ್ಕಲ್ : ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ , ಯುವಕನಿಗೆ ಚೂರಿ ಇರಿತ
Update: 2017-02-04 19:18 IST
ಸುರತ್ಕಲ್, ಫೆ.4: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಚೂರಿ ಇರಿದಿರುವ ಘಟನೆ ಶನಿವಾರ ಸಂಜೆ ಸುರತ್ಕಲ್ ಮೂಡಾ ಮಾರುಕಟ್ಟೆಯ ಬಳಿ ನಡೆದಿದೆ.
ಚೂರಿ ಇರಿತಕ್ಕೆ ಒಳಗಾದವರನ್ನು ಸುರತ್ಕಲ್ ಕೃಷ್ಣಾಪುರ ನಿವಾಸಿ ಶಮೀಮ್ (19 ) ಎಂದು ಗುರುತಿಸಲಾಗಿದೆ.
ಮುನಾವರ್ ಹಾಗೂ ಮೂಡಾ ಮಾರ್ಕೆಟ್‌ನಲ್ಲಿ ಬಟ್ಟೆಯ ಅಂಗಡಿ ಹೊಂದಿದ್ದಾರೆ ಎನ್ನಲಾದ ಶಮೀಮ್‌ರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ಮಾತು ವಿಕೋಪಕ್ಕೆ ತಿರುಗಿ, ಶಮೀಮ್ ಅವರ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ ಮುನಾವರ್ ಎಂಬಾತ ಶಮೀಮ್ ಅವರಿಗೆ ಚೂರಿ ಇರಿದಿದ್ದಾರೆ ಎನ್ನಲಾಗಿದೆ. ಆರೋಪಿ ಮುನಾವರ್ ಸ್ಥಳೀಯ ನಿವಾಸಿ ಎಂದು ಹೇಳಲಾಗಿದೆ.
ಚೂರಿ ಇರಿತದಿಂದ ಗಾಯಗೊಂಡಿರುವ ಶಮೀಮ್‌ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸುರತ್ಕಲ್ ಪೊಲೀಸರು ಸ್ಥಳಕ್ಕಾಗಮಸಿ ತನಿಖೆ ನಡೆಸುತ್ತಿದ್ದು , ಪ್ರಕರಣ ದಾಖಲಿಸಿಕೊಂಡಿದ್ದಾರೆ.