×
Ad

ಇ-ವ್ಯಾಲೆಟ್ ವಂಚನೆ: ಥಾಣೆಯ ಉದ್ಯಮಿಗೆ 2.50 ಲಕ್ಷ ರೂ. ಪಂಗನಾಮ

Update: 2017-02-04 20:44 IST

ಥಾಣೆ, ಫೆ.4: ಇ-ವ್ಯಾಲೆಟ್ ಹಗರಣವೊಂದರಲ್ಲಿ, ಇಲ್ಲಿನ 45 ವರ್ಷ ವಯಸ್ಸಿನ ಉದ್ಯಮಿಯೊಬ್ಬರಿಗೆ ಸುಮಾರು 2.50 ಲಕ್ಷ ರೂ.ವಂಚಿಸಿದ ಘಟನೆ ಬೆಳಕಿಗೆ ಬಂದಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. ಉದ್ಯಮಿಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲವಾದರೂ, ಆತ ಥಾಣೆಯ ವಸಂತ್ ನಗರ ನಿವಾಸಿಯೆಂದು ತಿಳಿದುಬಂದಿದೆ. ಅಪರಿಚಿತ ವ್ಯಕ್ತಿಯೊಬ್ಬ ಜನವರಿ 30ರಿಂದ ಫೆಬ್ರವರಿ 1ರ ನಡುವೆ ಇ-ವ್ಯಾಲೆಟ್ ಮೂಲಕ ವ್ಯವಹಾರಗಳನ್ನು ನಡೆಸಿ ಉದ್ಯಮಿಯಿಂದ 2.50 ಲಕ್ಷ ರೂ.ಕ್ಕೂ ಅಧಿಕ ಹಣವನ್ನು ಲಪಟಾಯಿಸಿದ್ದಾನೆಂದು ಸಬ್‌ಇನ್ಸ್‌ಪೆಕ್ಟರ್ ಎಸ್.ಎಸ್. ಕುಲಕರ್ಣಿ ಹೇಳಿದ್ದಾರೆ.

 ವಿದೇಶಿ ಬ್ಯಾಂಕ್ ಖಾತೆಯೊಂದಿಗೆ ಜೋಡಿಸಲ್ಪಟ್ಟ ತನ್ನ ಇ-ವ್ಯಾಲೆಟ್‌ಗಳಿಂದ 2,49,943 ರೂ. ಹಣವನ್ನು ಆರೋಪಿಯು ಮೋಸದಿಂದ ಆತನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆಂದು ಉದ್ಯಮಿಯು ಆರೋಪಿಸಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಂಚನೆಯೆಸಗಿದ ಅಪರಿಚಿತನ ವಿರುದ್ಧ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News