×
Ad

ಪಾರಿಕ್ಕರ್ ಮತ್ತೆ ಗೋವಾ ರಾಜಕೀಯಕ್ಕೆ ?

Update: 2017-02-04 22:31 IST

   ಪಣಜಿ,ಫೆ.4: ತಾನೋರ್ವ ಪಕ್ಷದ ನಾಯಕರ ನಿರ್ದೇಶನದಂತೆ ಕೆಲಸ ಮಾಡುವ ನಿಷ್ಠಾವಂತ ಕಾರ್ಯಕರ್ತನೆಂದು ತನ್ನನ್ನು ಬಣ್ಣಿಸಿಕೊಂಡಿರುವ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ವಿಧಾನಸಭಾ ಚುನಾವಣೆಯ ಬಳಿಕ ತಾನು ಗೋವಾದ ರಾಜಕೀಯಕ್ಕೆ ಮರಳಲಿದ್ದೇನೆಂಬ ಊಹಾಪೋಹಗಳನ್ನು ಇನ್ನೂ ಜೀವಂತವಾಗಿ ರಿಸಿದ್ದಾರೆ.

   ಪಣಜಿಯ ಮತಗಟ್ಟೆಯೊಂದರಲ್ಲಿ ಮತದಾನ ಆರಂಭಗೊಂಡ ಬೆನ್ನಿಗೇ ಮತಚಲಾಯಿಸಿದ ಪಾರಿಕ್ಕರ್‌ರನ್ನು ಸುದ್ದಿಗಾರರು ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವಿರಾ ಎಂಬ ಪ್ರಶ್ನೆಗೆ ಅವರು, ‘‘ನಾನೋರ್ವ ಪಕ್ಷದ ಕಾರ್ಯಕರ್ತ. ನಾನೇನು ಮಾಡಬೇಕೆಂಬುದನ್ನು ಪಕ್ಷವೇ ನಿರ್ಧರಿಸಲಿ ಎಂದರು. ಪಕ್ಷಾಧ್ಯಕ್ಷ ಅಮಿತ್ ಶಾ ಈಗಾಗಲೇ ಇದನ್ನು ಹೇಳಿದ್ದು, ತಾನು ಕೂಡಾ ಪುನರುಚ್ಚರಿಸುತ್ತಿರುವುದಾಗಿ ಪಾರಿಕ್ಕರ್ ಹೇಳಿದರು.

 ಆದಾಗ್ಯೂ, ತಾನು ದಿಲ್ಲಿಯಲ್ಲಿ ಗೋವಾ ಖಾದ್ಯಗಳನ್ನು ಸವಿಯುವ ಅವಕಾಶ ತಪ್ಪಿಹೋಗಿರುವುದಾಗಿ ಹೇಳಿದ್ದಾರೆ. ತನ್ನ ಈ ಮಾತನ್ನು ಜನರು ಯಾವುದೇ ಅರ್ಥದಲ್ಲೂ ಗ್ರಹಿಸಿಕೊಳ್ಳಬಹುದೆಂದು ಅವರು ಸೂಚ್ಯವಾಗಿ ಹೇಳಿದರು.ಗೋವಾದ ಆಹಾರವನ್ನು ತಾನು ಇಷ್ಟಪಡುತ್ತೇನೆಂಬ ಹೇಳಿಕೆಯ ಬಗ್ಗೆ ಪತ್ರಕರ್ತರು ಪಾರಿಕ್ಕರ್‌ರ ಗಮನಸೆಳೆದಾಗ, ‘‘ನಾನು ದಿಲ್ಲಿಯಲ್ಲಿ 4 ಕೆ.ಜಿ.ಕಳೆದುಕೊಂಡಿದ್ದೇನೆ. ಇದಕ್ಕೆ ಆಹಾರವೇ ಮುಖ್ಯ ಕಾರಣ’’ ಎಂದವರು ಚಟಾಕಿ ಹಾರಿಸಿದರು.

 ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಮೂರನೆ ಎರಡು ಬಹುಮತದೊಂದಿಗೆ ಮರಳಿ ಅಧಿಕಾರಕ್ಕೇರಲಿದೆಯೆಂದು ಪಾರಿಕ್ಕರ್ ಭವಿಷ್ಯ ನುಡಿದರು. ನಾಲ್ಕೈದು ಕ್ಷೇತ್ರಗಳನ್ನು ಹೊರತುಪಡಿಸಿ, ಎಂಜಿಪಿ ನೇತೃತ್ವದ ಮೈತ್ರಿಕೂಟದಿಂದ ಬಿಜೆಪಿಗೆ ಯಾವುದೇ ಬೆದರಿಕೆಯಿಲ್ಲವೆಂದು ಅವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News