×
Ad

ಭ್ರಷ್ಟಾಚಾರ ನಿಗ್ರಹಕ್ಕೆ ವಿನೂತನ ಕಾರ್ಯತಂತ್ರ: ಲೋಕಾಯುಕ್ತ ನ್ಯಾ. ವಿಶ್ವನಾಥ ಶೆಟ್ಟಿ

Update: 2017-02-04 23:48 IST

ಸುಬ್ರಹ್ಮಣ್ಯ, ಫೆ.4: ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತಕ್ಕಿರುವ ನೈಜ ಅಧಿಕಾರವನ್ನು ಪ್ರಯೋಗಿಸಿ ಭ್ರಷ್ಟರ ನಿಗ್ರಹವನ್ನು ಮಾಡಲಾಗುವುದು ಎಂದು ನೂತನ ಲೋಕಾಯುಕ್ತ ನ್ಯಾಯ ಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಹೇಳಿದ್ದಾರೆ.

 ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಶನಿವಾರ ಭೇಟಿ ನೀಡಿದ ಅವರು ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಭ್ರಷ್ಟಾಚಾರ ನಿಗ್ರಹಕ್ಕೆ ಮುಂದೆ ವಿನೂತನ ಕಾರ್ಯತಂತ್ರ ರೂಪಿಸಲಿದ್ದೇನೆ. ಈಗಾಗಲೇ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದ ಅವರು, ಲೋಕಾಯುಕ್ತ ಮತ್ತು ಎಸಿಬಿ ನಡುವೆ ಯಾವುದೇ ಗೊಂದಲ ಇಲ್ಲ. ಈಗಾಗಲೇ ಎಸಿಬಿಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಯೋಜನೆಗಳ ಕುರಿತು ರೂಪು ರೇಷೆಗಳನ್ನು ಸಿದ್ಧಪಡಿಸಲಾಗಿದೆ. ಮುಂದಿನ ವಾರ ಎರಡನೆ ಸುತ್ತಿನ ಮಾತುಕತೆ ನಡೆಸಲಾಗುವುದು. ಆ ಬಳಿಕ ವಿನೂತನ ಕಾರ್ಯತಂತ್ರ ರೂಪಿಸಲಿದ್ದೇವೆ ಎಂದರು.

ಜನರು ತಮ್ಮ ಗ್ರಾಮ ಅಥವಾ ಊರಿನಲ್ಲಿ ಭ್ರಷ್ಟ ಅಧಿಕಾರಿಗಳು ಇದ್ದರೆ ತನಗೆ ನೇರವಾಗಿ ದೂರವಾಣಿ ಮೂಲಕ ಅಥವಾ ಪತ್ರ ಮುಖೇನ ಮಾಹಿತಿ ನೀಡ ಬಹುದು. ಈ ಬಗ್ಗೆ ಯಾವುದೇ ಭಯ ಬೇಡ ಎಂದರು.

ಈ ಸಂದರ್ಭ ಲೋಕಾಯುಕ್ತರ ಪತ್ನಿ ಶಕುಂತಳಾ, ಮಂಗಳೂರು ಲೋಕಾಯುಕ್ತ ಎಸ್ಪಿ ರಶ್ಮಿ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News