ಕಿಡಿಗೇಡಿಗಳಿಂದ ತ್ಯಾಜ್ಯಕ್ಕೆ ಬೆಂಕಿ: ಪರಿಸರ ಮಾಲಿನ್ಯ

Update: 2017-02-04 18:27 GMT

ಕಾಪು, ೆ.4: ಕಾಪು ಪುರಸಭಾ ವ್ಯಾಪ್ತಿಯ ಮಹಾದೇವಿ ಶಾಲೆ ಬಳಿಯಿರುವ ತ್ಯಾಜ್ಯಕ್ಕೆ ಶುಕ್ರವಾರ ರಾತ್ರಿ ಅಪರಿಚಿತ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಘಟನೆಯ ಬಳಿಕ ಕಾಪು ಪರಿಸರದಲ್ಲಿ ಶನಿವಾರವಿಡೀ ವಾಸನೆಯುಕ್ತ ಹೊಗೆ ಪಸರಿಸಿ, ಪರಿಸರ ಮಾಲಿನ್ಯದ ಪರಿಸ್ಥಿತಿ ಉದ್ಭವವಾಗಿತ್ತೆನ್ನಲಾಗಿದೆ.

ಕಾಪು ಡಂಪಿಂಗ್ ಯಾರ್ಡ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದ ಪರಿಣಾಮ ಹಲವು ವರ್ಷಗಳಿಂದ ಸಂಗ್ರಹಿತವಾಗಿದ್ದ ಸುಮಾರು 500 ಲೋಡ್‌ಗಳಷ್ಟು ಕಸ-ತ್ಯಾಜ್ಯ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಅದರ ಪರಿಣಾಮವಾಗಿ ಕಾಪು ಪೇಟೆ ಪರಿಸರದಲ್ಲೆಲ್ಲಾ ಸಂಪೂರ್ಣ ಹೊಗೆ ಆವರಿಸಿಕೊಂಡಿದೆ. ಶುಕ್ರವಾರ ರಾತ್ರಿಯಿಂದೀಚೆಗೆ ಹೊತ್ತಿ ಉರಿಯುತ್ತಿದ್ದ ತ್ಯಾಜ್ಯ ವಸ್ತುಗಳು ಮತ್ತು ಸುತ್ತಲೂ ಆವರಿಸಿದ್ದ ಹೊಗೆಯ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಪುರಸಭಾ ಸದಸ್ಯ ಅನಿಲ್ ಕುಮಾರ್, ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪುರಸಭೆಯ ಸ್ವಚ್ಛತಾ ಸಿಬ್ಬಂದಿ ಶ್ರಮ ವಹಿಸಿ, ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಪು ಪುರಸಭೆೆಯ ಸಿಇಒ ರಾಯಪ್ಪ ಮಾತನಾಡಿ, ಹಲವು ವರ್ಷಗಳಿಂದ ಕಾಡುತ್ತಿದ್ದ ಕಾಪುವಿನ ತ್ಯಾಜ್ಯ ಸಮಸ್ಯೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ರಸ್ತೆಯ ಎರಡೂ ಕಡೆ ತಡೆ ಬೇಲಿ ನಿರ್ಮಿಸಿ ಹೊರಗಿನಿಂದ ಬಂದು ತ್ಯಾಜ್ಯ ಸುರಿಯದಂತೆ ನಿರ್ಬಂಧ ವಿಸಲಾಗಿತ್ತು. ರಾತ್ರಿ ಹೊತ್ತಲ್ಲಿ ಎಲ್ಲೆಲ್ಲಿಂದಲೋ ತಂದು ತ್ಯಾಜ್ಯ ಸುರಿಯುವವರಿಗೆ ದಂಡವನ್ನೂ ವಿಸಲಾಗುತ್ತಿತ್ತು. ಆದರೆ ಇದೀಗ ಇಲ್ಲಿ ಬೆಂಕಿ ಹಚ್ಚುವ ಮೂಲಕ ತ್ಯಾಜ್ಯದ ಸಮಸ್ಯೆಗೆ ಮುಕ್ತಿ ನೀಡುವ ಪ್ರಯತ್ನಕ್ಕೆ ಕಿಡಿಗೇಡಿಗಳು ವಿಘ್ನವುಂಟು ಮಾಡಿದ್ದಾರೆ ಎಂದು ದೂರಿದ್ದಾರೆ.

ಶಾಲೆಗೆ ರಜೆ

ವಾಸನೆಯುಕ್ತ ಹೊಗೆಯ ಕಾರಣದಿಂದಾಗಿ ಪರಿಸರದ ಜನರಲ್ಲಿ ಕಣ್ಣು ಉರಿ ಮತ್ತು ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡ ಪರಿಣಾಮ ಯಾವುದೇ ಅನಾರೋಗ್ಯಕರ ಪರಿಸ್ಥಿತಿ ನಿರ್ಮಾಣವಾಗುವುದನ್ನು ತಪ್ಪಿಸಲು ಡಂಪಿಂಗ್‌ಯಾರ್ಡ್‌ನ ಪಕ್ಕದಲ್ಲಿಯೇ ಇರುವ ಕಾಪು ಮಹಾದೇವಿ ಪ್ರೌಢ ಶಾಲೆಗೆ ರಜೆ ನೀಡಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News