×
Ad

​ 36 ರೂ.ಗೆ 1 ಜಿಬಿ ಬಿಎಸ್ ಎನ್ ಎಲ್ ಕೊಡುಗೆ ನಾಳೆಯಿಂದ ಜಾರಿ

Update: 2017-02-05 14:10 IST

ಹೊಸದಿಲ್ಲಿ, ಫೆ.5: ಗ್ರಾಹಕರನ್ನು ಉಳಿಸಲು ಹೆಣಗಾಡುತ್ತಿರುವ ಸರಕಾರ ಸ್ವಾಮ್ಯದ ದೂರಸಂಪರ್ಕ    ಬಿಎಸ್‌ಎನ್ ಎಲ್ ಇದೀಗ ಗ್ರಾಹಕರನ್ನು ಆಕರ್ಷಿಸಲು  ಕೊಡುಗೆ ನೀಡಲು ಮುಂದಾಗಿದ್ದು,  36 ರೂ.ಗಳಿಗೆ .1 ಜಿಬಿ ಡೇಟಾ ನೀಡಲಿದೆ.
ಬಿಎಸ್ ಎನ್ ಎಲ್ ನ ಹೊಸ ಯೋಜನೆ ಸೋಮವಾರ (ಫೆ.6)ದಿಂದ ಜಾರಿಯಾಗಲಿದೆ.ವ್ಯಾಲಿಡಿಟಿ 28 ದಿನಗಳು.
ಎಲ್ಲ ಮೊಬೈಲ್ ಕಂಪನಿಗಳಿಗೂ ಶಾಕ್‌ ನೀಡಿರುವ ರಿಲಾಯನ್ಸ್‌ ಜಿಯೋವನ್ನು ಮಣಿಸಲು ಬಿಎಸ್ ಎನ್ ಎಲ್ ಪೈಪೋಟಿಗಳಿದಿದೆ.
ಈ ತನಕ  291 ಯೋಜನೆಯಲ್ಲಿ 2 ಜಿಬಿ ಡೇಟಾ ದೊರೆಯುತ್ತಿತ್ತು. ಇನ್ನು ಮುಂದೆ ಈ ಪ್ಲಾನ್ ಬಳಸುವವರಿಗೆ 28 ದಿನಗಳವರೆಗೆ 8 ಜಿಬಿ ಡೇಟಾ ಸಿಗಲಿದೆ. 78 ರೂ. ಪ್ಲಾನ್ ಬಳಸುವ ಗ್ರಾಹಕರಿಗೆ ಡಬಲ್‌ ಡೇಟಾ  ಅಂದರೆ 4ಜಿಬಿ ಡೇಟಾ ದೊರೆಯಲಿದೆ.
,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News