×
Ad

ಹನೀಫ್ ಕೊಲೆಗೆ ಪ್ರೇರಣೆ ನೀಡಿದವರನ್ನು ಬಂಧಿಸಲು ಆಗ್ರಹ

Update: 2017-02-05 15:36 IST

ಉಡುಪಿ, ಫೆ.5: ಮತಾಂಧ ಅಂಕಿತ್ ಪೂಜಾರಿಯಿಂದ ಚೂರಿ ಇರಿತ ಕ್ಕೊಳಗಾಗಿ ಹತ್ಯೆಗೀಡಾದ ಕೊಡಂಕೂರಿನ ಹನೀಫ್ ಹಾಗೂ ಗಂಭೀರ ಗಾಯಗೊಂಡಿದ್ದ ಶಬ್ಬೀರ್ ಅವರ ಮನೆಗೆ ಪಿಎಫ್‌ಐ ಹಾಗೂ ಎಸ್‌ಡಿಪಿಐ ಉಡುಪಿ ಜಿಲ್ಲಾ ನಿಯೋಗವು ಶನಿವಾರ ಭೇಟಿ ಸಾಂತ್ವನ ಹೇಳಿದೆ.

ಪ್ರಕರಣದ ಆರೋಪಿಯಾಗಿರುವ ಹಿಂದೂ ಜಾಗರಣ ವೇದಿಕೆಯ ಅಂಕಿತ್ ಪೂಜಾರಿ, ಹತ್ಯೆ ನಡೆಸಿದ ಬಳಿಕ ಆದಿಉಡುಪಿ ಮಸೀದಿಗೆ ತೆರಳಿ ಮಸೀದಿಯ ಗಾಜುಗಳಿಗೆ ಕಲ್ಲುಗಳನ್ನು ಎಸೆದು ಪರಾರಿಯಾಗಿದ್ದು, ಇದು ಮೇಲ್ನೋಟಕ್ಕೆ ಕೋಮು ಸೌಹಾರ್ದ ಕೆಡಿಸುವ ಉದ್ದೇಶದಿಂದ ಕೃತ್ಯದಂತೆ ಕಂಡುಬರುತ್ತದೆ ಎಂದು ನಿಯೋಗವು ತಿಳಿಸಿದೆ.

ಈ ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಆರೋಪಿಗೆ ಸಹಕರಿಸಿ ದವರ ಹಾಗೂ ಪ್ರೇರಣೆ ನೀಡಿದವರನ್ನು ಬಂಧಿಸಬೇಕು. ರಾಜ್ಯ ಸರಕಾರವು ಹನೀಫ್ ಮನೆಯವರಿಗೆ ಪರಿಹಾರ ನೀಡಬೇಕು ಹಾಗೂ ಶಬ್ಬೀರ್ ಆಸ್ಪತ್ರೆ ವೆಚ್ಚವನ್ನು ಭರಿಸಬೇಕೆಂದು ನಿಯೋಗ ಆಗ್ರಹಿಸಿದೆ. ನಿಯೋಗವು ಹನೀಫ್ ಮತ್ತು ಶಬ್ಬೀರ್ ಕುಟುಂಬಗಳಿಗೆ ಧನಸಹಾಯ ನೀಡಿತು.

ನಿಯೋಗದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ನಿಸಾರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಫಯಾಝ್ ಮಲ್ಪೆ, ವಿಭಾಗೀಯ ಅಧ್ಯಕ್ಷ ಅಝರ್ ದೊಡ್ಡಣಗುಡ್ಡೆ, ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮಲ್ಪೆ, ಉಡುಪಿ ವಿಧಾನ ಸಭಾಧ್ಯಕ್ಷ ನಝೀರ್ ಉಡುಪಿ ಮೊದ ಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News