ವಿವಾಹಿತ ನೇಣು ಬಿಗಿದು ಆತ್ಮಹತ್ಯೆ
Update: 2017-02-05 16:23 IST
ಮೂಡುಬಿದಿರೆ,ಫೆ.05: ಮಾರ್ಪಾಡಿ ಗ್ರಾಮದ ಮರಿಯಾಡಿ ಎಂಬಲ್ಲಿ ವಿವಾಹಿತರೋರ್ವರು ಶನಿವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಲ್ಲಿನ ನಿವಾಸಿ ಶರೀಫ್ (37) ಆತ್ಮಹತ್ಯೆ ಮಾಡಿಕೊಂಡಾತ. ಇವರು ವಿವಾಹಿತರಾಗಿದ್ದು ಇಬ್ಬರು ಗಂಡು ಮಕ್ಕಳಿದ್ದಾರೆ. ತನ್ನ ಪತ್ನಿ ಹಾಗೂ ಮಕ್ಕಳು ಮನೆಯಿಂದ ಕಾರ್ಯ ನಿಮಿತ್ತ ಹೊರಹೋಗಿದ್ದ ವೇಳೆ ಮನೆಯ ಪಕ್ಕಾಸಿಗೆ ನೇಣು ಹಾಕಿಕೊಂಡಿದ್ದಾರೆ. ಮನೆಯಲ್ಲಿದ್ದ ತನ್ನ ತಾಯಿಯನ್ನು ಸಮೀಪದ ತನ್ನ ಸಹೋದರನ ಮನೆಗೆ ಕಳುಹಿಸಿದ್ದ ಇವರು ನಂತರ ಮನೆಯ ಬಾಗಿಲು ಭದ್ರಪಡಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಮೃತ ಶರೀಫ್ ಮಾನಸಿಕವಾಗಿ ಒತ್ತಡವನ್ನು ಎದುರಿಸುತ್ತಿದ್ದುದೇ ಈ ಕೃತ್ಯಕ್ಕೆ ಕಾರಣ ಎಂದು ತಿಳಿದುಬಂದಿದೆ. ಪತ್ನಿ ಮನೆಗೆ ವಾಪಾಸು ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.