×
Ad

ರಾ.ಹೆ.169 ಕಾಮಗಾರಿ ತ್ವರಿತಗೊಳಿಸುವಂತೆ ಸಂಸದರಿಗೆ ಮನವಿ

Update: 2017-02-05 17:06 IST

ಮೂಡುಬಿದಿರೆ,ಫೆ.05 : ರಾ.ಹೆ. 169 ಮಂಗಳೂರು ಮೂಡುಬಿದಿರೆ ಕಾರ್ಕಳ ಕೋಲಾಪುರ ರಸ್ತೆಯ ಸರ್ವೇ ಕಾರ್ಯ ಸ್ಥಗಿತಗೊಂಡಿದ್ದು, ಈ ಕುರಿತು ಮಿಜಾರು ನಾಗರಿಕ ಹಿತರಕ್ಷಣಾ ವೇದಿಕೆ ಸಂಸದ ನಳಿನ್ ಕುಮಾರ್ ಗಮನಕ್ಕೆ ತಂದಿದ್ದು, ಸೂಕ್ತ ಕ್ರಮ ಕೈಗೊಂಡು ರಸ್ತೆ ಕಾಮಗಾರಿ ಶೀಘ್ರಗೊಳಿಸುವಂತೆ ಮನವಿ ನೀಡಿದ್ದಾರೆ.

ಮಾರ್ಚ್ 2017ರ ಮೊದಲು ಈ ರಸ್ತೆಯ ಸರ್ವೇಕಾರ್ಯ ಮುಗಿಯಬೇಕಿದ್ದು, ಆದರೆ ಭೂಸ್ವಾಧೀನಾಧಿಕಾರಿ ತಮ್ಮ ಹುದ್ದೆಯಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿರುವುದು ಅದಕ್ಕೆ ತಡೆಯಾಗಿದೆ. ಈ ಅವಧಿಯಲ್ಲಿ ಸರ್ವೇಕಾರ್ಯ ಮುಗಿಯದಿದ್ದಲ್ಲಿ ಕಾಮಗಾರಿ ಇನ್ನೂ 2 ವರ್ಷ ವಿಳಂಭವಾಗುವ ಸಾಧ್ಯತೆ ಇದೆ ಎಂದು ವೇದಿಕೆ ಸಂಸದರಿಗೆ ಮನವಿಯಲ್ಲಿ ತಿಳಿಸಿದೆ.

ಈಗಾಗಲೇ ಈ ರಸ್ತೆಯಲ್ಲಿ ಹಲವು ಅಪಘಾತಗಳು ಸಂಭವಿಸುತ್ತಿದ್ದು, ಮರಣ ಹಾಗೂ ಗಾಯಗಳಾಗುತ್ತಿವೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News