×
Ad

ತುಳುಗೀತೆ ಗಾಯನ ಸ್ಪರ್ಧೆ ಉದ್ಘಾಟನೆ

Update: 2017-02-05 17:25 IST

ಉಡುಪಿ, ಫೆ.5: ಉಡುಪಿ ತುಳುಕೂಟದ ವತಿಯಿಂದ 22ನೆ ವರ್ಷದ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಗೀತೆ ಗಾಯನ ಸ್ಪರ್ಧೆ ಯನ್ನು ಉಡುಪಿಯ ಜಗನ್ನಾಥ ಸಭಾಭವನದಲ್ಲಿ ರವಿವಾರ ಆಯೋಜಿಸ ಲಾಗಿತ್ತು.

ಅಧ್ಯಕ್ಷತೆಯನ್ನು ವಹಿಸಿದ್ದ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳುನಾಡಿನಲ್ಲಿ ತುಳು ಭಾಷೆ, ಸಂಸ್ಕೃತಿಯನ್ನು ಜೀವಂತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ತುಳುವರೂ ತಮ್ಮ ತಮ್ಮ ಮನೆಯಲ್ಲಿ ಕಡ್ಡಾಯವಾಗಿ ತುಳು ಭಾಷೆಯನ್ನು ಮಾತನಾಡುವ ಪರಿಪಾಠ ವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

 ಎಸೆಸೆಲ್ಸಿಯಲ್ಲಿ ತುಳು ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 930ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಾಲಿನಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಇದು ಯುವ ಜನಾಂಗಕ್ಕೆ ತುಳುಭಾಷೆಯ ಮೇಲೆ ಇರುವ ಅಭಿಮಾನವನ್ನು ತೋರಿಸಿಕೊಟ್ಟಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿ ಉಡುಪಿ ರಾಧಾಕೃಷ್ಣ ನೃತ್ಯನಿಕೇತನದ ವೀಣಾ ಎಂ. ಸಾಮಗ ಮಾತನಾಡಿ, ಈ ಗಾಯನ ಕಾರ್ಯಕ್ರಮದ ಮೂಲಕ ತುಳು ನಾಡಿನ ಹಿರಿಯ ತುಳು ಸಾಹಿತಿಗಳಿಗೆ ನುಡಿನಮನ ಸಲ್ಲಿಸುವ ಅವಕಾಶ ವಾಗಿದೆ. ಸಮೃದ್ಧವಾಗಿರುವ ತುಳು ಭಾಷೆ ಶೀಘ್ರವಾಗಿ 8ನೇ ಪರಿಚ್ಛೇಧಕ್ಕೆ ಸೇರುವ ಮೂಲಕ ಹೊಸ ತುಳು ರಾಜ್ಯದ ಉದಯವಾಗಬೇಕು ಎಂದರು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಲಯನೆಸ್ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಕಿ ವತ್ಸಲಾ ಕರ್ಕೇರ ಉದ್ಘಾಟಿಸಿದರು. ತುಳುಕೂಟದ ಉಪಾಧ್ಯಕ್ಷ ರಾದ ಮಹಮ್ಮದ್ ಮೌಲಾ, ಯಶೋಧ ಕೇಶವ್, ಕೋಶಾಧಿಕಾರಿ ಎಂ.ಜಿ.ಚೈತನ್ಯ, ಯು.ಜೆ.ದೇವಾಡಿಗ ಉಪಸ್ಥಿತರಿದ್ದರು.

ಸ್ಪರ್ಧೆ ಸಂಚಾಲಕ ವಿವೇಕಾನಂದ ಎನ್. ಸ್ವಾಗತಿಸಿದರು. ತುಳು ಕೂಟದ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ವಂದಿಸಿದರು. ಉಪನ್ಯಾಸಕರಾದ ನಾಗರಾಜ್ ಜಿ.ಎಸ್., ದಯಾನಂದ್, ವಿ.ಕೆ.ಯಾದವ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News