×
Ad

ರಥಸಪ್ತಮಿ ದಿನದಂದು ಆದ್ದೂರಿಯಾಗಿ ನಡೆದ ಪಲ್ಲಕಿ ಉತ್ಸವ

Update: 2017-02-05 17:37 IST

ಭಟ್ಕಳ,ಫೆ.5: ರಥಸಪ್ತಮಿಯ ದಿನದಂದು ಇಲ್ಲಿನ ಆಸರಕೇರಿಯ ನಿಚ್ಛಲಮಕ್ಕಿ ಶ್ರೀ ವೆಂಕಟ್ರಮಣ ದೇವರ ಪಲ್ಲಕಿ ಮಹೋತ್ಸವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಸಾವಿರಾರು ಜನರ ಭಕ್ತಿಯ ಭಜನೆಯೊಂದಿಗೆ ನೆರವೇರಿತು.

 ಸಂಜೆ ದೇವಸ್ಥಾನದಿಂದ ಹೊರಟ ದೇವರ ಪಾಲಕಿ ಮೆರವಣಿಗೆ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಪುರವರ್ಗದ ತನಕ ಹಾಗೂ ಪುನಃ ಮಣ್ಕುಳಿಯಿಂದ ಹೊರಟು ಗದ್ದುಗೆಯ ಶ್ರೀಧರ ಪದ್ಮಾವತಿ ದೇವಸ್ಥಾನಕ್ಕೆ ಹೋಗಿ ಅಲ್ಲಿಂದ ಚೌಥನಿಯ ಕುದ್ರೆಬೀರಪ್ಪ ದೇವಸ್ಥಾನಕ್ಕೆ ತೆರಳಿ ದೇವಸ್ಥಾನಕ್ಕೆ ಬಂದು ಸಂಪನ್ನಗೊಂಡಿತು. ಪಲ್ಲಕ್ಕಿ ಉತ್ಸವದ ನಿಮಿತ್ತ ಭಕ್ತರು ತಮ್ಮ ಮನೆ, ಅಂಡಿಗಳ ಮುಂದೆ ಸಿಂಗರಿಸಿ ದೇವರಿಗೆ ಭಕ್ತಿಯಿಂದ ಹೂವು ಹಣ್ಣುಕಾಯಿ ಸಮರ್ಪಿಸಿದರು. ಪಲ್ಲಕ್ಕಿ ಮಹೋತ್ಸವದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಿ. ಬಿ. ನಾಯ್ಕ, ಉಪಾಧ್ಯಕ್ಷ ಕೆ. ಆರ್. ನಾಯ್ಕ, ಪ್ರಧಾನ ಕಾರ್ಯದರ್ಶಿ ರಾಜೇಶ ನಾಯ್ಕ, ಶ್ರೀರಾಮ ಸೇವಾ ಸಮಿತಿಯ ಸಂಚಾಲಕರಾದ ಗೋವಿಂದ ನಾಯ್ಕ, ಈಶ್ವರ ಎನ್. ನಾಯ್ಕ, ಪ್ರಮುಖರಾದ ಸುನೀಲ್ ನಾಯ್ಕ, ಈರಪ್ಪ ಗರ್ಡಿಕರ್, ಸತೀಶಕುಮಾರ ನಾಯ್ಕ, ಮಂಜಪ್ಪ ನಾಯ್ಕ, ನಾರಾಯಣ ನಾಯ್ಕ, ಗಣಪತಿ ನಾಯ್ಕ, ಈರಪ್ಪ ನಾಯ್ಕ, ಮಧುಕರ್ ನಾಯ್ಕ ವೆಂಕಟೇಶ ನಾಯ್ಕ, ಕೃಷ್ಣಾ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ ಸಾವಿರಾರು ಜನರು ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ತುಲಾಭಾರ ಸೇವೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News