ಆತೂರು ದಫ್ ಸ್ಪರ್ಧೆ : ಮಜೂರು ತಂಡ ಪ್ರಥಮ

Update: 2017-02-05 12:56 GMT
ಪ್ರಥಮ ಸ್ಥಾನ ಪಡೆದ ಮಜೂರು ತಂಡ

ಉಪ್ಪಿನಂಗಡಿ,ಫೆ.5 : ಆತೂರು ಬದ್ರಿಯಾ ಜುಮಾ ಮಸೀದಿ ಹಾಗೂ ಮಿಸ್ಬಾಹುಲ್ ಹುದಾ ಸಾಹಿತ್ಯ ಸಮಾಜ ಇವುಗಳ ಆಶ್ರಯದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಸಹಕಾರದೊಂದಿಗೆ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮವು ಆತೂರು ಸಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಿತು.

ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಗಂಡಿಬಾಗಿಲು ಕುತುಬಿಯ್ಯ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಅಲ್-ಹಾದಿ ಅನಸ್ ತಂಙಳ್ ಅಲ್-ಅರ್ಹರಿ ಅಧ್ಯಕ್ಷತೆ ವಹಿಸಿದ್ದರು.

ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಚೇಳಾರಿ ಸದಸ್ಯ ಹಾಜಿ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು, ಮದ್ರಸ ಮ್ಯಾನೇಜ್‌ಮೆಂಟ್ ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಅಬ್ದುರ್ರಹ್ಮಾನ್ ಹಾಜಿ ಕೊಲ್ಲೆಜಾಲ್, ಶ್ರೀರಂಗಪಟ್ಟಣ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಧ್ಯಾಪಕ ಡಾ. ಮುಹಮ್ಮದ್ ಮುಸ್ತಫಾ, ಆತೂರು ಎಂಜೆಂ ಖತೀಬ್ ಹನೀಫ್ ಫೈಝಿ, ಅಧ್ಯಕ್ಷ ಅಯ್ಯೂಬ್ ಹಾಜಿ, ಆತೂರು ಬಿಜೆಎಂ ಅಧ್ಯಕ್ಷ ಅಬ್ದುಲ್ ರಝಾಕ್ ಬಿ.ಕೆ., ಟಿಐಎಂ ಮುಖ್ಯ ಶಿಕ್ಷಕ ಅಬ್ದುಲ್ ಲತೀಫ್ ಮುಸ್ಲಿಯಾರ್, ಶಕ್ತಿನಗರ-ಕೆಮ್ಮಾರ ಎಚ್‌ಐಎಂ ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ಲ ಮುಸ್ಲಿಯಾರ್, ಆತೂರು ಟಿಐಎಂ ಶಿಕ್ಷಕರಾದ ಹನೀಫ್ ಅರ್ಶದಿ, ಮೂಸಾ ಮುಸ್ಲಿಯಾರ್, ಗಂಡಿಬಾಗಿಲು ಕುತುಬಿಯ ಮಸೀದಿ ಶಿಕ್ಷಕ ಅಬ್ದುಲ್ ರಹಿಮಾನ್ ಅರ್ಶದಿ, ಆತೂರು ಮಸೀದಿ ಶಿಕ್ಷಕರುಗಳಾದ ಬದ್ರುದ್ದೀನ್ ಮುಸ್ಲಿಯಾರ್, ಇಲ್ಯಾಸ್ ಝುಹ್‌ರಿ, ಕುಂಡಾಜೆ ಖತೀಬ್ ಮುನೀರ್ ಅನ್ವರಿ, ನಿರಾಜೆ ಮದ್ರಸ ಮುಖ್ಯ ಶಿಕ್ಷಕ ಅಬ್ದುಲ್ ರಝಾಕ್ ದಾರಿಮಿ, ಪಿ.ಎ. ಮರ್ದಾಳ ಆತೂರು, ಆತೂರು ಬದ್ರಿಯಾ ಶಾಲಾ ಸಂಚಾಲಕ ಆದಂ ಹಾಜಿ, ಆತೂರು ವಿದ್ಯಾಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಅಬ್ದುಲ್ ಅಝೀರ್ ಕಿಡ್ಸ್, ಆತೂರು ಬೈಲು ಖಮರುಲ್ ಇಸ್ಲಾಂ ಮದ್ರಸ ಅಧ್ಯಕ್ಷ ಬಶೀರ್ ಎ.ಕೆ., ಕಂಡಾಜೆ ಮಸ್ಜಿದುನ್ನೂರ್ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್, ಆತೂರು ಸಂಶುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷ ಹಾಜಿ ಮುಹಮ್ಮದ್ ಅಮೈ, ನೀರಾಜೆ ನೂರುಲ್ ಹುದಾ ಮದ್ರಸ ಅಧ್ಯಕ್ಷ ಇಬ್ರಾಹಿಂ ಮೋನು, ಕೊಲ ಸೌಹಾರ್ದ ವೇದಿಕೆ ಅಧ್ಯಕ್ಷ ನಝೀರ್ ಎನ್.ಕೆ., ಕೆಮ್ಮಾರ್ ಹಿದಾಯತುಲ್ ಇಸ್ಲಾಂ ಮದ್ರಸ ಅಧ್ಯಕ್ಷ ಎನ್.ಎ. ಇಸ್ಹಾಕ್, ನೀರಾಜೆ ಅನ್ಸಾರುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಅಬ್ದುಲ್ ಅಝೀರ್, ಆತೂರು ಎಂಜೆಎಂ ಮಸೀದಿ ಕಾರ್ಯದರ್ಶಿ ಫಲೂಲುದ್ದೀನ್, ಆತೂರು ಬಿಜೆಎಂ ಕಾರ್ಯದರ್ಶಿ ಸಿರಾಜ್ ಬಡ್ಡಮೆ, ಆತೂರು ಬದ್ರಿಯಾ ಸ್ಕೂಲ್ ಕಾರ್ಯದರ್ಶಿ ಯಹ್ಯಾ ಎಲ್ಯಂಗ, ದ.ಕ. ಜಿಲ್ಲಾ ಎಸ್‌ಕೆಎಸ್‌ಬಿವಿ ಉಪಾಧ್ಯಕ್ಷ ಸ್ವಾದಿಕ್ ಆತೂರು, ಪತ್ರಕರ್ತರಾದ ಸಿದ್ದೀಕ್ ನೀರಾಜೆ, ನಝೀರ್ ಕೊಲ, ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಉದ್ಯಮಿಗಳಾದ ಅಬ್ದುಲ್ ಲತೀಫ್ ಆತೂರು, ಅಶ್ರಫ್ ಬಿಳಿಯೂರು, ಝಾಕಿರ್ ಹುಸೈನ್ ಹಾಜಿ, ಬಿ.ಕೆ. ಅಬ್ಬಾಸ್ ಆತೂರು ಅರಫಾ ಮೈಸೂರು, ಎ.ಎಸ್. ಮುಹಮ್ಮದ್ ರಫೀಕ್ ದುಬೈ, ಹೈದರ್ ಕಲಾಯಿ, ರಮ್ಲಾನ್ ಎಲ್ಯಂಗ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಮಿಸ್ಬಾಹುಲ್ ಹುದಾ ಚೆಯರ್‌ಮೆನ್ ಆಸಿಫ್ ಹೇಂತಾರ್, ಅಧ್ಯಕ್ಷ ಉಮರುಲ್ ಫಾರೂಕ್, ಪದಾಧಿಕಾರಿಗಳಾದ ನವಾರ್, ಮುಸ್ತಫಾ, ಅಥಾವುಲ್ಲಾ, ಮುನೀರ್, ಸ್ವದಖತುಲ್ಲಾ ಮೊದಲಾದವರು ಉಪಸ್ಥಿತರಿದ್ದರು.

ಮಿಸ್ಬಾಹುಲ್ ಹುದಾ ಪ್ರಧಾನ ಕಾರ್ಯದರ್ಶಿ ನಾಸಿರ್ ಎ.ಎಸ್. ಸ್ವಾಗತಿಸಿ, ಕಾರ್ಯದರ್ಶಿ ಕಬೀರ್ ಹೇಂತಾರ್ ವಂದಿಸಿದರು. ನೌಫಲ್ ಕುಡ್ತಮುಗೇರು ಹಾಗೂ ರಫೀಕ್ ಗೋಳಿತ್ತಡಿ ಆತೂರು ಕಾರ್ಯಕ್ರಮ ನಿರೂಪಿಸಿದರು. ಹುಸೈನ್ ಸಿರಾಜ್, ನೌಫಲ್ ಹಾಗೂ ಅಬ್ದುಲ್ ಖಾದರ್ ತೀರ್ಪುಗಾರರಾಗಿ ಸಹಕರಿಸಿದರು.

ಕಾರ್ಯಕ್ರಮದ ಮುನ್ನಾದಿನ ಕೇರಳ-ಕೊಳತ್ತರ ಅಬ್ದುಸ್ಸಮದ್ ದಾರಿಮಿ ಹಾಗೂ ಸಂಗಡಿಗರಿಂದ ಅಡರ್‌ಕಲತ್ತಿಲೇ ಅಲ್ಬುದ ಬಾಲನ್ ವಿಷಯದ ಕುರಿತು ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು.

ಇದೇ ವೇಳೆ ಆತೂರು-ಬೈಲ್ ಕಮರುಲ್ ಇಸ್ಲಾಂ ಮದ್ರಸ ಮುಖ್ಯ ಶಿಕ್ಷಕ ಇಬ್ರಾಹಿಂ ಮುಸ್ಲಿಯಾರ್, ಎಚ್. ಆದಂ ಹೇಂತಾರು ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಮಜೂರು ತಂಡಕ್ಕೆ ದಫ್ ಪ್ರಶಸ್ತಿ

ದಪ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಾಪು-ಮಜೂರು ಸಿರಾಜುಲ್ ಹುದಾ ದಫ್ ತಂಡ ಪ್ರಥಮ, ಬಿ.ಸಿ.ರೋಡು-ಮಿತ್ತಬೈಲು ಸಂಶುಲ್ ಉಲಮಾ ದಫ್ ತಂಡ ದ್ವಿತೀಯ ಹಾಗೂ ಪುತ್ತೂರು-ಬನ್ನೂರು ದಖೀರತುಲ್ ಉಖ್‌ರಾ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಮಜೂರು ತಂಡ ಹಾಡುಗಾರರಾದ ಹುಸೈನ್ ಹಾಗೂ ಅಝರುದ್ದೀನ್ ಉತ್ತಮ ಹಾಡುಗಾರರಾಗಿ ಮೂಡಿಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News